ಸಕಲೇಶಪುರ:  ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಈಗಾಗಲೇ ಶುರುವಾಗಿದ್ದು, ಸರ್ಕಾರ ಈ ವಿಷಯದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳದೆ, ಜನರ ಹಕ್ಕು ಹಾಗೂ ಕಾನೂನುಗಳನ್ನು ಗಾಳಿಗೆ ತೂರಿ, ಪರಿಸರ ನಾಶ ಮಾಡಿ, ಅನುಕೂಲಸಿಂಧು ರಾಜಕಾರಣಕ್ಕಾಗಿ ಯೋಜನೆಯನ್ನು ಆತುರಾತುರವಾಗಿ ಕೈಗೆತ್ತಿಕೊಂಡಿದೆ ಎಂಬ ಆರೋಪ ಈ ಭಾಗದ ತಜ್ಞರು, ಪರಿಸರವಾದಿಗಳು ಹಾಗೂ ಬಹುತೇಕ ರೈತರಿಂದ ಕೇಳಿ ಬರುತ್ತಿದೆ.

ಪಶ್ಚಿಮಾಭಿಮುಖವಾಗಿ ಸುಮಾರು 80 ಕಿ.ಮೀ. ಉದ್ದ, 18 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಕಾಯ್ದಿರಿಸಿದ ದಟ್ಟ ಮಳೆಕಾಡುಗಳ ಗರ್ಭದಲ್ಲಿ ಎತ್ತಿನಹಳ್ಳ, ಮೂರು ಉಪ ಹೊಳೆಗಳು, ಕಾಡುಮನೆ ಹೊಳೆ, ಕೇರಿಹೊಳೆ, ಹೊಂಗಡಹಳ್ಳ ಹರಿಯುತ್ತವೆ. ಇವುಗಳ ನೀರನ್ನು ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ದಕ್ಷಿಣ ಭಾರತದ ಮಳೆ ಮೂಲ ಹಾಗೂ ಜನರ ಉಸಿರಾಗಿರುವ ಪಶ್ಚಿಮಘಟ್ಟದ ಈ ಹಳ್ಳ, ತೊರೆ, ಹೊಳೆಗಳ ನೀರನ್ನು ಪೂರ್ವಾಭಿಮುಖವಾಗಿ ಹರಿಸಿದರೆ, ಕಾಡಿನಲ್ಲಿ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ನೀರಿನ ತತ್ವಾರ ಎದುರಿಸಿ ನಾಶವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ರೈತರ ಕಳವಳವಾಗಿದೆ.

ಮಳೆ ಭರಿಸುವ ಮಳೆಕಾಡುಗಳೆಂದೇ ಗುರುತಿಸಲಾಗುವ ಪಶ್ಚಿಮಘಟ್ಟ ನಾಶವಾದರೆ, ಮಳೆ ಕಡಿಮೆಯಾಗಿ ಎತ್ತಿನಹಳ್ಳ ಹಾಗೂ ಇತರ ಎಲ್ಲ ಹಳ್ಳಗಳಲ್ಲಿ ನೀರು ಇಲ್ಲವಾಗುತ್ತದೆ. ಆಗ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜು ಮಾಡುವುದಿರಲಿ, ಮಲೆನಾಡಿನಲ್ಲಿಯೇ ಕುಡಿಯುವ ನೀರಿಗೆ ತತ್ವಾರ ಉಂಟಾಗುತ್ತದೆ ಎಂದು ಪ್ರತಿಪಾದಿಸಿರುವ ಪರಿಸರವಾದಿಗಳು, ಈ ಯೋಜನೆ ಅವೈಜ್ಞಾನಿಕವಾಗಿದ್ದು ಪಶ್ಚಿಮಘಟ್ಟವನ್ನು ಸರ್ವನಾಶ ಮಾಡುವುದರಿಂದ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಶ್ಚಿಮಘಟ್ಟದ ರಕ್ಷಿತ ಅರಣ್ಯದಲ್ಲಿಯೇ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಿ ಸುಮಾರು 300 ಮೆಗಾವ್ಯಾಟ್ ವಿದ್ಯುತ್ ಬಳಕೆ ಮಾಡಿ, ಭಾರಿ ಯಂತ್ರಗಳಿಂದ ಸುಮಾರು ಒಂದು ಸಾವಿರ ಮೀಟರ್ ಎತ್ತರಕ್ಕೆ ನೀರು ಎತ್ತುವುದರಿಂದ ಈ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಪರಿಸರ ಪರಿಣಾಮ ವರದಿ ಹಾಗೂ ಸಾಮಾಜಿಕ ಅಧ್ಯಯನ ವರದಿ ಪಡೆಯಬೇಕು.

ಪಶ್ಚಿಮಘಟ್ಟ ನಾಶ ಮಾಡುವ ಇಂತಹ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡ ರಾಜ್ಯ ಸರ್ಕಾರ ಈ ಯೋಜನೆಯ ಹೆಸರನ್ನೇ ಬದಲಾಯಿಸಿದೆ. ಆರಂಭದಲ್ಲಿ ಸ್ಕೀಂ ಫಾರ್ ಡೈವರ್ಷನ್ ಆಫ್ ಫ್ಲಡ್ ವಾಟರ್ ಫ್ರಮ್ ಸಕಲೇಶಪುರ (ವೆಸ್ಟ್) ಟು ಕೋಲಾರ್/ಚಿಕ್ಕಬಳ್ಳಾಪುರ (ಇಸ್ಟ್) ಎಂಬ ಹೆಸರನ್ನು ಯೋಜನೆಗೆ ಇಡಲಾಗಿತ್ತು.

ನಂತರ ಎತ್ತಿನಹೊಳೆ ತಿರುವು ಯೋಜನೆ ಎಂದು ಎರಡನೆ ಬಾರಿ ಹೆಸರು ಬದಲಾವಣೆ ಮಾಡಲಾಯಿತು. ಕೇಂದ್ರದಿಂದ ಪರಿಸರ ಮತ್ತು ಸಾಮಾಜಿಕ ವರದಿ ಅನುಮತಿ ತಪ್ಪಿಸಿಕೊಳ್ಳುವುದಕ್ಕಾಗಿ, ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ ಎಂದು ಹೆಸರು ಬದಲಾವಣೆ ಮಾಡಿಕೊಂಡಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

10 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿಗೆ ನೀರು ಒದಗಿಸುವ ಯಾವುದೇ ನೀರಾವರಿ ಯೋಜನೆಗೆ ಕೇಂದ್ರದ ಅನುಮತಿ ಬೇಕು. ಆದರೆ, ಈ ಯೋಜನೆಯಲ್ಲಿ ಸುಮಾರು 28 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶ ಇದೆ ಎಂದು ಕರ್ನಾಟಕ ನೀರಾವರಿ ನಿಗಮ ಯೋಜನಾ ವರದಿಯಲ್ಲಿ ಹೇಳಿದೆ. ಕಾಲುವೆಯಲ್ಲಿ ನೀರು ಸರಬರಾಜು ಮಾಡುವಾಗ ಸುಮಾರು 100 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. 50 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಬೇಕಾದರೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಅನುಮತಿ ಅಗತ್ಯ.

‘ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ ನೋಟಿಫಿಕೇಷನ್– 2006’ ಪ್ರಕಾರ, ಮೇಲೆ ಉಲ್ಲೇಖಿಸಿದ ಎಲ್ಲ ಅನುಮತಿ ಪಡೆಯಬೇಕು. ಯೋಜನೆಯನ್ನು ಅರಣ್ಯ ಪ್ರದೇಶದೊಳಗೆ ಅನುಷ್ಠಾನ ಮಾಡುವುದರಿಂದ ಅರಣ್ಯ ಇಲಾಖೆಯ ಅನುಮತಿಯೂ ಬೇಕು. 2009ರ ತಿದ್ದುಪಡಿಯಂತೆ ಕುಡಿಯುವ ನೀರಿನ ಯೋಜನೆಯಾದರೆ ಅನುಮತಿ ಬೇಡ ಎಂಬುದನ್ನೇ ಮುಂದಿಟ್ಟುಕೊಂಡು, ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಕಾಯ್ದೆ, ಜೀವ ವೈವಿಧ್ಯ ಕಾಯ್ದೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಾಮಗಾರಿ ಆರಂಭಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯ ಮೆಟ್ಟಿಲು ಹತ್ತಲು ಪರಿಸರವಾದಿಗಳು ಹಾಗೂ ವಿವಿಧ ಸಂಘಟನೆಗಳು ಮುಂದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.