ಚಿಕ್ಕಜಾಜೂರು: ಜೂನ್ 2ರಂದು ನಡೆ ಯುವ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಪತ್ರಿಕೆ ಹಾಕುವ ಯುವಕ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಮನೆ ಮನೆಗೆ ಪತ್ರಿಕೆ ಹಾಕುವ ಎ.ಕುಬೇರಪ್ಪ (ಗೌಡ್ರ ಕುಪ್ಪ, ಪ್ರೀತಿಯಿಂದ ಎಲ್ಲರೂ ಕರೆಯುವ ಹೆಸರು) ಎಂಬು ವವರು ಗ್ರಾಮದ ಒಂದನೇ ವಾರ್ಡ್ ನಿಂದ ಸಾಮಾನ್ಯ ಪುರುಷ ಮೀಸಲು ಕ್ಷೇತ್ರಕ್ಕೆ ಗೆಳೆಯರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿ, ಈಗ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಇದೇ ವಾರ್ಡ್‌ಗೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರೊಬ್ಬರು ನಾಮಪತ್ರ ಸಲ್ಲಿಸಿ, ಈಗ ಹಿಂದಕ್ಕೆ ಪಡೆದಿದ್ದಾರೆ. ಈಗ ಕುಬೇರಪ್ಪ ಸೇರಿದಂತೆ ಮೂವರು ಸ್ಪರ್ಧಾಳುಗಳು ಕಣದಲ್ಲಿದ್ದಾರೆ. ಗೆಳೆಯರ ಬೆಂಬಲವೇ ಇವರ ಗೆಲುವಿಗೆ ಶ್ರೀರಕ್ಷೆಯಾ ಗಲಿದೆ ಎಂದು ನಂಬಿದ್ದಾರೆ.

ಚುನಾವಣೆಯಲ್ಲಿ ತಟಸ್ಥನಾಗಿ ರುವಂತೆ ಹಲವರು ಇವರ ಮೇಲೆ ಒತ್ತಡ ಹೇರುತ್ತಿದ್ದಾರಂತೆ. ‘ಸೋಲು ಗೆಲುವು ಇದ್ದದ್ದೆ, ಚುನಾವಣಾ ಫಲಿತಾಂಶ ಏನೇ ಬಂದರೂ ಅದನ್ನು ಸ್ವೀಕರಿಸುತ್ತಾನೆ’ ಎನ್ನುತ್ತಾರೆ ಕುಬೇರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.