ಬಸವಾಪಟ್ಟಣ: ಭಾರತೀಯ ಸಂಸ್ಕೃತಿ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶಂಕರರ ಕೊಡುಗೆ ಅಪಾರ ಎಂದು ಇಲ್ಲಿನ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್. ವೆಂಕಣ್ಣ ತಿಳಿಸಿದರು.

ಇಲ್ಲಿನ ಶ್ರೀರಾಮ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಅದ್ವೈತ ಸಿದ್ಧಾಂತದ ಪ್ರತಿಪಾದಕ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯದಲ್ಲಿಯೇ ಸನ್ಯಾಸ ಸ್ವೀಕರಿಸಿದ ಶಂಕರರು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ದೇಶದಾದ್ಯಂತ ಪ್ರಚಾರ ಮಾಡಲು ಎರಡು ಬಾರಿ ಪಾದಚಾರಿಗಳಾಗಿ ಭಾರತವನ್ನು ಸುತ್ತಿ ಜನ ಜಾಗೃತಿ ಮೂಡಿಸಿದರು. ಅವರ ಸಿದ್ಧಾಂತಗಳ ಪಾಲನೆ ಅವಶ್ಯಕ ಎಂದು ವೆಂಕಣ್ಣ ಹೇಳಿದರು.

ಶಂಕರಾಚಾರ್ಯಯರ ಜಯಂತಿ ಆಚರಣೆ ಸಾಂಕೇತಿಕವಾಗಿರದೆ ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು ಅರಿತು ನಡೆಯಬೇಕು ಎಂದು ವಿಪ್ರ ಸಮಾಜದ ಮುಖಂಡ ಎನ್. ಮುರಳೀಧರರಾವ್ ತಿಳಿಸಿದರು.

ಮಹಿಳೆಯರು ಶಂಕರ ವಿರಚಿತ ಸ್ತೋತ್ರಗಳನ್ನು ಹಾಡಿದರು. ವಿಶೇಷಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.