ಡಕಾರ್: ಪಶ್ಚಿಮ ಸೆನೆಗಲ್‌ನ ಟಿವೌವಾನ್ ನಗರದ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ರಾಷ್ಟ್ರದ ಅಧ್ಯಕ್ಷರು ಬುಧವಾರ ತಡರಾತ್ರಿ ತಿಳಿಸಿದ್ದಾರೆ.

'ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ. ಘಟನೆ ನೋವು ಮತ್ತು ನಿರಾಶೆ ಮೂಡಿಸಿದೆ' ಎಂದು ಅಧ್ಯಕ್ಷ ಮ್ಯಾಕಿ ಸಾಲ್ ಅವರು ಟ್ವಿಟ್ ಮಾಡಿತಿಳಿಸಿದ್ದಾರೆ.

ಟಿವೌವಾನ್‌ನ ಸಾರಿಗೆ ಕೇಂದ್ರದಲ್ಲಿರುವ ಮಾಮ್ ಅಬ್ದೌ ಅಜೀಜ್ ಸೈ ದಬಾಖ್ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿದೆ. ಬೆಂಕಿ ಅತ್ಯಂತ ವೇಗವಾಗಿ ಆವರಿಸಿತ್ತು' ಎಂದು ಸೆನೆಗಲ್‌ನ ರಾಜಕೀಯ ನಾಯಕ ಡಿಯೋಪ್ ಸೈ ತಿಳಿಸಿದ್ದಾರೆ.

ಘಟನೆಯಲ್ಲಿ ಮೂರು ಶಿಶುಗಳನ್ನು ರಕ್ಷಿಸಲಾಗಿದೆ ಎಂದು ನಗರದ ಮೇಯರ್ ಡೆಂಬಾ ಡಿಯೋಪ್ ಹೇಳಿದ್ದಾರೆ.

ಮೇಮ್ ಅಬ್ದೌ ಅಜೀಜ್ ಸೈ ದಬಾಖ್ ಆಸ್ಪತ್ರೆಯನ್ನು ಇತ್ತೀಚೆಗಷ್ಟೇ ಉದ್ಘಾಟಿಸಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.