ಬಾಗ್ದಾದ್: ಕುರ್ದಿಸ್ತಾನ್‌ನ ಸುಲೈಮಾನಿಯದಲ್ಲಿ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದ್ದು ನಾಲ್ವರು ಸಾವಿಗೀಡಾಗಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಕಜಿವ ಪ್ರದೇಶದ ಮನೆಯೊಂದರಲ್ಲಿ ಬಳಸುತ್ತಿದ್ದ ಗ್ಯಾಸ್ ಟ್ಯಾಂಕ್‌ನಲ್ಲಿನ ಎಲ್‌ಪಿಜಿ ಸೋರಿಕೆಯಿಂದ ಭಾರೀ ಸ್ಫೋಟ ಸಂಭವಿಸಿದೆ ಎಂದು ಗವರ್ನರ್ ಹವಲ್ ಅಬುಬಕಿರ್ ಹೇಳಿದ್ದಾರೆ ಎಂದು ಕ್ಸುನುವ ವರದಿ ಮಾಡಿದೆ.

ಸ್ಫೋಟದಿಂದ ಮನೆಯ ಮೂರು ಅಂತಸ್ತುಗಳು ಹಾನಿಗೊಂಡಿವೆ. ಸ್ಫೋಟದ ಸಮಯದಲ್ಲಿ ಮನೆಯಲ್ಲಿ 20ಕ್ಕೂ ಹೆಚ್ಚು ಮಂದಿಯಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಅಬುಬಕಿರ್ ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ಪ್ರಾರಂಭಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.