ಪ್ಯಾರಿಸ್: ಜಗತ್ತಿನಾದ್ಯಂತ 2019ರಲ್ಲಿ ನಲವತ್ತೊಂಬತ್ತು ಪತ್ರಕರ್ತರ ಹತ್ಯೆಯಾಗಿದೆ ಎಂದು 'ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್' ಹೇಳಿದೆ.

ಯೆಮೆನ್, ಸಿರಿಯಾ ಹಾಗೂ ಅಫ್ಗಾನಿಸ್ತಾನದ ಘರ್ಷಣೆಗಳಲ್ಲಿ ಹೆಚ್ಚಿನ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಪ್ರಸ್ತುತ ದಾಖಲಾಗಿರುವ ಸಾವಿನ ಪ್ರಮಾಣ ಕಳೆದ 16 ವರ್ಷಗಳಲ್ಲೇ ಅತಿ ಕಡಿಮೆ ಎಂದಿರುವ ಪ್ಯಾರಿಸ್ ಮೂಲದ ಮಾಧ್ಯಮ ಸಂಸ್ಥೆ, 'ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ ವೃತ್ತಿಯಾಗಿದೆ' ಎಂದು ಎಚ್ಚರಿಕೆ ನೀಡಿದೆ.

ಆರ್ಎಸ್ಎಫ್ ಎಂದೇ ಪ್ರಚಲಿತದಲ್ಲಿರುವ ಫ್ರಾನ್ಸ್ ಮಾಧ್ಯಮ ಸಂಸ್ಥೆಯ ಪ್ರಕಾರ, ಕಳೆದ 20 ವರ್ಷಗಳಲ್ಲಿ ಸರಾಸರಿ ವರ್ಷಕ್ಕೆ 80 ಪತ್ರಕರ್ತರ ಹತ್ಯೆಯಾಗಿದೆ ಎಂದಿದೆ.

ಇದನ್ನೂ ಓದಿ:ಈ ಹತ್ಯೆ ಒಂದು ಬೆದರಿಕೆಯೇ? ಒಂದು ಸ್ಫೂರ್ತಿಯೇ?

ಶಾಂತ ಪರಿಸ್ಥಿತಿ ಹೊಂದಿರುವ ರಾಷ್ಟ್ರಗಳಲ್ಲಿಯೂ ಪತ್ರಕರ್ತರ ಹತ್ಯೆಯಾಗಿರುವುದು ಅಪಾಯದ ಸೂಚನೆಯಾಗಿದೆ ಎಂದು ಆರ್ಎಸ್ಎಫ್ ಮುಖ್ಯಸ್ಥ ಕ್ರಿಸ್ಟೊಫೆ ಹೇಳಿದ್ದಾರೆ.

ಮೆಕ್ಸಿಕೊ ಒಂದರಲ್ಲಿಯೇ 10 ಪತ್ರಕರ್ತರು ಹಾಗೂ ಲ್ಯಾಟಿನ್ ಅಮೆರಿಕಾದಲ್ಲಿ ಒಟ್ಟು 14 ಪತ್ರಕರ್ತರ ಹತ್ಯೆ ನಡೆದಿದೆ.ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೇ ಪತ್ರಕರ್ತರು ಅವರ ವರದಿ ಕಾರ್ಯಾಚರಣೆಗಳಿಂದಾಗಿಯೇ ಹತ್ಯೆಯಾಗುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿದೆ. ಕೆಲವು ಪತ್ರಕರ್ತರು ಬಂಧಕ್ಕೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಶಿಕ್ಷಾ ಭಯವಿಲ್ಲದ ಸಂಸ್ಕೃತಿ’ಯಲ್ಲಿ ದನಿ ಎತ್ತುವ ಸವಾಲು

2019ರಲ್ಲಿ 49 ಪತ್ರಕರ್ತರ ಹತ್ಯೆಯಾಗಿದ್ದು, 389 ಪತ್ರಕರ್ತರು ಬಂಧನದಲ್ಲಿದ್ದಾರೆ. ಚೀನಾ, ಈಜಿಪ್ಟ್ ಹಾಗೂ ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚು ಪತ್ರಕರ್ತರು ಬಂಧನಕ್ಕೆ ಒಳಗಾಗಿದ್ದಾರೆ. ಸಿರಿಯಾ, ಯೆಮೆನ್, ಇರಾಕ್ ಹಾಗೂ ಉಕ್ರೇನ್ನಲ್ಲಿ 57 ಪತ್ರಕರ್ತರನ್ನು ಒತ್ತೆಯಾಳು ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.