ಸಿಂಗಪುರ : ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ 51 ವರ್ಷದ ಮಹಿಳೆಗೆ ಸಿಂಗಪುರ ನ್ಯಾಯಾಲಯ 7 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.

ಮಲಿಹಾ ರಾಮು ಎಂಬವವರು ತಮಿಳ್ ಮ್ಯಾಟ್ರಿಮೊನಿ ವೆಬ್ಸೈಟಿನಲ್ಲಿ ಕೀರ್ತನಾ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದರು. ಅದರಲ್ಲಿತಾವು 25 ವರ್ಷದ ಅವಿವಾಹಿತ ಮಹಿಳೆ ಎಂದು ಬರೆದುಕೊಂಡು, ಪ್ರೊಫೈಲ್ನಲ್ಲಿ ಸಂಬಂಧಿಕರ ಫೋಟೊ ಹಾಕಿದ್ದರು.

2018ರಲ್ಲಿ ಭಾರತೀಯ ಮೂಲದ ಸಂತ್ರಸ್ತ ವ್ಯಕ್ತಿಯ ತಂದೆ ಗೋವಿಂದನ್ ಧನಸೇಕರನ್ ಮುರಳಿಕೃಷ್ಣ ಅವರುಪ್ರೊಫೈಲ್ ನೋಡಿ ತಮ್ಮ ಮಗನಿಗೆ ಸಂಗಾತಿ ಹುಡುಕುವ ಉದ್ದೇಶದಿಂದ ಸಂಪರ್ಕಿಸಿದ್ದರು.

ಮಲಿಹಾ ಸಂಬಂಧಿಯ ಫೋಟೋಗಳನ್ನು ಕಳುಹಿಸಿ, ಆಸ್ಟ್ರೇಲಿಯಾದಲ್ಲಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ವಿಡಿಯೋ ಕಾಲ್ಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಬಳಿಕ ತಾಯಿಯ ಮೃತಪಟ್ಟಿದ್ದರೂ, ಅವರ ಅನಾರೋಗ್ಯ ನೆಪ ಹೇಳಿ ತಂದೆ ಮತ್ತು ಮಗನಿಂದ ಸುಮಾರು 5,750 ಸಿಂಗಪುರ ಡಾಲರ್ (2.80 ಲಕ್ಷಕ್ಕೂ ಹೆಚ್ಚು) ಪಡೆದು ವಂಚಿಸಿದ್ದರು. ಪ್ರಕರಣ ಸಂಬಂಧ ನ್ಯಾಯಾಲಯ 7 ತಿಂಗಳ ಕಾರಾಗೃಹ ಶಿಕ್ಷಿ ವಿಧಿಸಿದೆ.

ಈ ಹಿಂದೆ 2006 ಮತ್ತು 2007ರಲ್ಲೂ ಇಂಥದ್ದೇ ಪ್ರಕರಣದಲ್ಲಿ ಮಲಿಹಾ ರಾಮು ಅವರಿಗೆ ಶಿಕ್ಷೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.