ವಾಷಿಂಗ್ಟನ್ (ಪಿಟಿಐ): ಅಮೆರಿಕಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಬೆಂಬಲಿಸಿ ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರು 30 ನಿಮಿಷಗಳ ಸಂಗೀತ ಪ್ರದರ್ಶನದ ವಿಡಿಯೊವೊಂದನ್ನು ರೆಕಾರ್ಡ್ ಮಾಡಿದ್ದಾರೆ. ಇದು ಕಮಲಾ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಬಲ ನೀಡಲಿಲದೆ ಎಂದು ನಿರೀಕ್ಷಿಸಲಾಗಿದೆ.

ರೆಹಮಾನ್ ಅವರು ಹ್ಯಾರಿಸ್ಗೆ ಬೆಂಬಲ ನೀಡಿದ ದಕ್ಷಿಣ ಏಷ್ಯಾದ ಮೊದಲ ಪ್ರಮುಖ ಅಂತರರಾಷ್ಟ್ರೀಯ ಕಲಾವಿದರಾಗಿದ್ದಾರೆ.

‘ಈ ವಿಡಿಯೊ ಮೂಲಕ ರೆಹಮಾನ್ ಅವರು ಅಮೆರಿಕದ ಪ್ರಗತಿಯ ಪರವಾಗಿ ನಿಂತಿರುವ ನಾಯಕರು ಹಾಗೂ ಕಲಾವಿದರ ಸಮೂಹದೊಂದಿಗೆ ದನಿಗೂಡಿಸಿದ್ದಾರೆ’ ಎಂದು ಎಎಪಿಐ ವಿಕ್ಟರಿ ಫಂಡ್ನ ಅಧ್ಯಕ್ಷ ಶೇಖರ್ ನರಸಿಂಹನ್ ತಿಳಿಸಿದ್ದಾರೆ.

‘ಇದು ಕೇವಲ ಸಂಗೀತ ಪ್ರದರ್ಶನವಲ್ಲ. ಇದು ಮುಂದಿನ ಪ್ರಗತಿಗಾಗಿ ಮತಚಲಾವಣೆ ಮಾಡಲೆಂದು ನಮ್ಮ ಸಮುದಾಯಗಳಿಗೆ ನೀಡಿದ ಕರೆಯಾಗಿದೆ’ ಎಂದು ನರಸಿಂಹನ್ ತಿಳಿಸಿದ್ದಾರೆ.

ವಿಶ್ವದಾದ್ಯಂತ ದಕ್ಷಿಣ ಏಷ್ಯಾದ ಮತದಾರರನ್ನು ಕಮಲಾ ಹ್ಯಾರಿಸ್ಗೆ ಬೆಂಬಲ ನೀಡುವಂತೆ ಮಾಡಲು ಈ ವಿಡಿಯೊವನ್ನು ಪ್ರಮುಖ ದಕ್ಷಿಣ ಏಷ್ಯಾದ ಮಾಧ್ಯಮಗಳು ಹಾಗೂ ಎಎಪಿಐ ವಿಕ್ಟರಿ ಫಂಡ್ನ ಯೂಟ್ಯೂಬ್ನಲ್ಲಿ ಪ್ರಸಾರ ಮಾಡಲಾಗುತ್ತದೆ. ಅ.13ರಂದು ಎಎಪಿಐ ವಿಕ್ಟರಿ ಫಂಡ್ನ ಯೂಟ್ಯೂಬ್ನಲ್ಲಿ ಇದರ ಪ್ರಸಾರವಾಗಲಿದೆ. ಈಗಾಗಲೇ ಈ ವಿಡಿಯೊದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.