ಅಬುದಾಬಿ: ಪ್ರಧಾನಿ ನರೇಂದ್ರ ಮೋದಿಯವರು ಫೆ.14ರಂದು ಉದ್ಘಾಟಿಸಿದ್ದ ಅಬುಧಾಬಿ ಹಿಂದೂ ದೇವಾಲಯವು ಮಾರ್ಚ್ 1ರಿಂದ ಸಾರ್ವಜನಿಕರ ಭೇಟಿಗೆ ಮುಕ್ತವಾಗಿರಲಿದೆ ಎಂದು ದೇವಾಲಯದ ಮೂಲಗಳು ಮಾಹಿತಿ ನೀಡಿವೆ.

ದುಬೈ– ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಸುಮಾರು ₹ 700 ಕೋಟಿ ವೆಚ್ಚದಲ್ಲಿ ಈ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಫೆ.15 ರಿಂದ 29ರವರೆಗೆ ವಿಶೇಷ ಅತಿಥಿಗಳು ಮತ್ತು ಈ ಮೊದಲೇ ನೋಂದಣಿ ಮಾಡಿಕೊಂಡ ಗಣ್ಯರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮಾರ್ಚ್ 1ರಿಂದ ಪ್ರವಾಸಿಗರ ಭೇಟಿಗೆ ಮಂದಿರ ಮುಕ್ತವಾಗಿರಲಿದೆ.

ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ರವರೆಗೆ ದೇವಾಲಯವು ತೆರೆದಿರಲಿದೆ. ಪ್ರತಿ ಸೋಮವಾರ ಮಂದಿರ ಮುಚ್ಚಿರಲಿದ್ದು, ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ದೇವಾಲಯದ ವಕ್ತಾರರು ತಿಳಿಸಿದ್ದಾರೆ.
.ಅಬುಧಾಬಿಯಲ್ಲಿ ಪಶ್ಚಿಮ ಏಷ್ಯಾದ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ.PHOTOS | ಅಬುಧಾಬಿಯಲ್ಲಿ ನಿರ್ಮಾಣಗೊಂಡ ಮೊದಲ ಹಿಂದೂ ದೇಗುಲ ಉದ್ಘಾಟನೆಗೆ ಸಜ್ಜು.
ಮಂದಿರದಲ್ಲಿ ಶ್ರೀ ರಾಮ, ಶಿವ, ಜಗನ್ನಾಥ, ಕೃಷ್ಣ, ತಿರುಪತಿ ಬಾಲಾಜಿ, ಸ್ವಾಮಿನಾರಾಯಣ, ಮತ್ತು ಅಯ್ಯಪ್ಪ ದೇವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ಏಳು ದೇವರು ಯುಎಇಯ ಏಳು ಎಮಿರೆಟ್ಸ್ಗಳೆಂದು ಪರಿಗಣಿಸಲಾಗಿದೆ ಎಂದು ಬಿಎಪಿಎಸ್ನ ಅಂತರರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಸ್ವಾಮಿ ಬ್ರಹ್ಮವಿಹಾರಿದಾಸ್ ಅವರು ಪಿಟಿಐಗೆ ತಿಳಿಸಿದ್ದಾರೆ.

ವೈಜ್ಞಾನಿಕ ತಂತ್ರಗಳೊಂದಿಗೆ, ಪ್ರಾಚೀನ ವಾಸ್ತು ಶಿಲ್ಪದ ಶೈಲಿಗಳನ್ನು ಅಳವಡಿಸಿಕೊಂಡು, 300ಕ್ಕೂ ಹೆಚ್ಚು ಹೈಟೆಕ್ ಸೆನ್ಸಾರ್ಗಳೊಂದಿಗೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇವು ಮಂದಿರದ ತಾಪಮಾನ ಅಳೆಯಲು ಮತ್ತು ಭೂಕಂಪನಗಳ ಮೇಲೆ ನಿಗಾವಹಿಸಲು ನೆರವಾಗುತ್ತವೆ. ದೇವಾಲಯದ ನಿರ್ಮಾಣಕ್ಕೆ ಯಾವುದೇ ಲೋಹವನ್ನು ಬಳಸಿಲ್ಲ.

ಅಯೋಧ್ಯೆಯ ರಾಮಮಂದಿರದಂತೆಯೇ ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಮಂದಿರ ನಿರ್ಮಾಣಕ್ಕಾಗಿ ಯುಎಇ ಸರ್ಕಾರವು ಭೂಮಿಯನ್ನು ದಾನವಾಗಿ ನೀಡಿದೆ. ಇದು ದುಬೈನಲ್ಲಿ ನಿರ್ಮಿಸಲಾಗಿರುವ ಮೂರನೇ ಹಿಂದೂ ದೇವಾಲಯ. ಕಲ್ಲಿನ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವು ವಿಸ್ತೀರ್ಣದಲ್ಲಿ ಇತರ ದೇವಾಲಯಗಳಿಗಿಂತ ದೊಡ್ಡದು ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.