ಲಂಡನ್: ಬ್ರಿಟನ್ನಲ್ಲೇ ಅತ್ಯಂತ ಉತ್ತಮ ಪೋಷಾಕು ತೊಡುವವರ(ಬೆಸ್ಟ್ ಡ್ರೆಸ್ಡ್–2023) ಪಟ್ಟಿಯನ್ನು ಜನಪ್ರಿಯ ನಿಯತಕಾಲಿಕೆಯೊಂದು ಬಿಡುಗಡೆ ಮಾಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಹಾಗೂ ಇನ್ಫೊಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿ ಮೊದಲ ಸ್ಥಾನ ಪಡೆದಿದ್ದಾರೆ.

ಬ್ರಿಟನ್ನ ಟ್ಯಾಟ್ಲರ್ (Tatler) ನಿಯತಕಾಲಿಕೆ 'ಬೆಸ್ಟ್ ಡ್ರೆಸ್ಡ್–2023' ಪಟ್ಟಿಯನ್ನು ಸಿದ್ಧಪಡಿಸಿದ್ದು, ಬ್ರಿಟನ್ ಮಹಿಳಾ ಉದ್ಯಮಿಗಳು, ನಟ, ನಟಿಯರು ಸೇರಿ 25 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ನಿಯತಕಾಲಿಕೆಯ ಸೆಪ್ಟೆಂಬರ್ನ ಸಂಚಿಕೆಯಲ್ಲಿ ಇದು ಪ್ರಕಟವಾಗಲಿದೆ.

ಪಟ್ಟಿಯಲ್ಲಿ ಅಕ್ಷತಾ ಮೂರ್ತಿ ಹೆಸರು ಮೊದಲಿಗಿದ್ದು, ಅಕ್ಷತಾ ಅವರ ಜೊತೆಗೆ ಕೆನಡಾದ ಉದ್ಯಮಿ ಯಾನಾ ಪೀಲ್, ಲೇಡಿ ಡಾಲ್ಮೆನಿ, ಪ್ರಿನ್ಸೆಸ್ ಬೀಟ್ರಿಸ್ ಅವರ ಪತಿ ಎಡೋರ್ಡೊ ಮಾಪೆಲ್ಲಿ ಮೊಝಿ ಮತ್ತು ನಟಿ ಬಿಲ್ ನಿಘಿ ಅವರ ಹೆಸರು ಕೂಡ ಇದೆ.

ಟ್ಯಾಟ್ಲರ್ನ 'ಬೆಸ್ಟ್ ಡ್ರೆಸ್ಡ್ ಲಿಸ್ಟ್'ನಲ್ಲಿ ಅಕ್ಷತಾ ಮೂರ್ತಿ ಅವರು ಆಯ್ಕೆಯಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಚಾಂಡ್ಲರ್ ಟ್ರೆಗಾಸ್ಕೆಸ್, ಸಂಪಾದಕ

2007ರಲ್ಲಿ ಅಕ್ಷತಾ ಅವರು ಲಾಸ್ ಏಜಂಲಿಸ್ನ 'ಫ್ಯಾಷನ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್'ನಲ್ಲಿ ಅಧ್ಯಯನ ಮಾಡಿದ್ದರು. ಫ್ಯಾಷನ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಅಕ್ಷತಾ ಜಪಾನ್ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪಿಂಕ್ ಟಾಪ್ ಜೊತೆಗೆ ಬ್ಲ್ಯಾಕ್ ಟ್ರೌಸರ್ ಧರಿಸಿ ಮಿಂಚಿದ್ದರು. ಬ್ರಿಟನ್ ರಾಜ ಚಾರ್ಲ್ಸ್ ಅವರ ಪಟ್ಟಾಭಿಷೇಕದಲ್ಲಿಯೂ ಅವರ ಉಡುಗೆ ಎಲ್ಲರ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.