ದುಬೈ(ಎಪಿ): ‘ಈಜಿಪ್ಟ್ನಲ್ಲಿ 2019ರಿಂದ ಬಂಧನದಲ್ಲಿದ್ದ ತನ್ನ ವಾಹಿನಿಯ ವರದಿಗಾರನನ್ನು ಪೂರ್ವ ವಿಚಾರಣೆಯ ಬಳಿಕ ಬಿಡುಗಡೆಗೊಳಿಸಲಾಗಿದೆ’ ಎಂದು ‘ಅಲ್ ಜಝೀರಾ’ ಮಾಧ್ಯಮ ಸಂಸ್ಥೆ ಹೇಳಿದೆ.

ಹಿಶಾಮ್ ಅಬ್ದೆಲ್ ಅಜೀಜ್ ಬಿಡುಗಡೆಗೊಂಡಿರುವ ವರದಿಗಾರ. ಈ ಕುರಿತು ಈಜಿಪ್ಟ್ನ ಅಧಿಕಾರಿಗಳು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ಅಬ್ದೆಲ್ ಅಜೀಜ್ ಅವರನ್ನು ಭಾನುವಾರ ಬಿಡುಗಡೆಗೊಳಿಸಲಾಗಿದೆ ಎಂದು ಈಜಿಪ್ಟ್ನ ಪತ್ರಕರ್ತರ ಸಂಘದ ಮುಖ್ಯಸ್ಥ ಖಲೀದ್ ಅಲ್ ಬಾಲ್ಶಿಹೇಳಿದ್ದಾರೆ.

2019ರ ಜೂನ್ನಲ್ಲಿ ಕುಟುಂಬದ ಜೊತೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಕೈರೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಬ್ದೆಲ್ ಅಜೀಜ್ ಅವರನ್ನು ಅಧಿಕಾರಿಗಳು ತಡೆದಿದ್ದರು ಮತ್ತು ಬಳಿಕ ಅವರನ್ನು ವಶಕ್ಕೆ ಪಡೆದಿದ್ದರು ಎಂದು ‘ಅಲ್ ಜಝೀರಾ’ ಹೇಳಿದೆ.

‘ಜನರಲ್ ಅಬ್ದೆಲ್ ಫತ್ತಾಹ್ ಅಲ್ ಸಿಸಿ ಅವರು ಈಜಿಪ್ಟ್ನ ಅಧ್ಯಕ್ಷರಾದ ಬಳಿಕ ನಮ್ಮನ್ನು ಗುರಿಯಾಗಿಸಲಾಗುತ್ತಿದೆ’ ಎಂದು ‘ಅಲ್ ಜಝೀರಾ’ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.