ನ್ಯೂಯಾರ್ಕ್: ಗುಜರಾತ್ನಲ್ಲಿ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದು ಮಾಡುವುದಾಗಿ ಭರವಸೆ ಸಿಕ್ಕ ಬಳಿಕ ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿಯನ್ನು ಹತ್ಯೆ ಮಾಡಲು ಭಾರತ ಮೂಲದ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಎಂದು ಅಮೆರಿಕದ ಫೆಡರಲ್ ಪ್ರಾಸಿಕ್ಯೂಟರ್ ಹೇಳಿದ್ದಾರೆ.

ಅಮೆರಿಕ ಪ್ರಜೆಯನ್ನು ನ್ಯೂಯಾರ್ಕ್ ನಗರದಲ್ಲಿ ಕೊಲ್ಲಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತೀಯ ಮೂಲದ 52 ವರ್ಷದ ನಿಖಿಲ್ ಗುಪ್ತಾ ಎಂಬುವವರ ವಿರುದ್ಧ ಆರೋಪ ಹೊರಿಸಲಾಗಿದೆ. ಆದರೆ, ಹತ್ಯೆಯ ಸಂಚಿನ ಗುರಿಯಾಗಿದ್ದ ನ್ಯೂಯಾರ್ಕ್ ಪ್ರಜೆಯ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿಲ್ಲ.

ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂ ಅವರನ್ನು ಕೊಲ್ಲಲು ರೂಪಿಸಿದ್ದ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಕಳೆದ ವಾರ ಅಮೆರಿಕದ ಅಧಿಕಾರಿಗಳು ಹೇಳಿದ್ದರು. ಈ ಸಂಬಂಧ ಕೈವಾಡ ಕುರಿತಂತೆ ಭಾರತ ಸರ್ಕಾರಕ್ಕೆ ಅಮೆರಿಕ ಎಚ್ಚರಿಕೆ ಸಂದೇಶವನ್ನೂ ನೀಡಿತ್ತು.

ಪ್ರಕರಣ ಸಂಬಂಧ ವಿವರಗಳನ್ನು ಬಿಚ್ಚಿಟ್ಟಿರುವ ಅಮೆರಿಕದ ಪ್ರಾಸಿಕ್ಯೂಟರ್, ಗುಜರಾತ್ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡುವ ಭರವಸೆ ಸಿಕ್ಕ ಬಳಿಕವೇ ಗುಪ್ತಾ ಈ ಹತ್ಯೆ ಮಾಡಲು ಒಪ್ಪಿಕೊಂಡಿದ್ದರು ಎಂದು ಹೇಳಿದ್ದಾರೆ.

‘2023 ಮೇ ತಿಂಗಳ ಆರಂಭದಲ್ಲಿ ಎನ್ಕ್ರಿಪ್ಟೆಡ್ ಅಪ್ಲಿಕೇಶನ್ಗಳ ಮೂಲಕ ಸಿಸಿ-1 ಎಂಬ ಹೆಸರಿನವರು ಮತ್ತು ಗುಪ್ತಾ ನಡುವೆ ನಿರಂತರ ಟೆಲಿಫೋನಿಕ್ ಸಂಭಾಷಣೆ ಮತ್ತು ವಿದ್ಯುನ್ಮಾನ ಸಂವಹನಗಳು ನಡೆದಿವೆ. ಭಾರತದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ರದ್ಧತಿಗೆ ಪ್ರತಿಯಾಗಿ ಸಿಖ್ ಪ್ರತ್ಯೇಕತಾದಿಯನ್ನು ಕೊಲ್ಲಬೇಕೆಂದು ಸಿಸಿ–1 ಪ್ರಸ್ತಾವ ಇಡುತ್ತಾರೆ. ಗುಪ್ತಾ ಈ ಹತ್ಯೆಯ ಪ್ರಸ್ತಾವವನ್ನು ಒಪ್ಪಿಕೊಳ್ಳುತ್ತಾರೆ. ಹತ್ಯೆ ಸಂಚಿನ ಹೆಚ್ಚುವರಿ ಚರ್ಚೆಗಾಗಿ ನವದೆಹಲಿಯಲ್ಲಿ ಸಿಸಿ–1 ಅವರನ್ನು ಗುಪ್ತಾ ಖುದ್ದು ಭೇಟಿಯಾಗಿದ್ದಾರೆ. ಸಿಸಿ–1 ಭಾರತ ಸರ್ಕಾರದ ನೌಕರನಾಗಿದ್ದು, ಅವರೇ ಹತ್ಯೆಗೆ ಭಾರತದಿಂದ ನಿರ್ದೇಶನ ನೀಡುತ್ತಿದ್ದರು.’ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.

‘ಮೇ 6, 2023ರಂದು ಸಿಸಿ-1 ಅವರು ಎನ್ಕ್ರಿಪ್ಟೆಡ್ ಅಪ್ಲಿಕೇಶನ್ನಲ್ಲಿ ಗುಪ್ತಾ ಅವರಿಗೆ ಸಂದೇಶ ಕಳುಹಿಸಿದ್ದಾರೆ. 'ಈ ಫೋನ್ ನಂಬರಿಗೆ ನನ್ನ ಹೆಸರನ್ನು ಸಿಸಿ- 1 ಎಂದು ಸೇವ್ ಮಾಡಿಕೊಳ್ಳಿ ಎಂದು ಸೂಚಿಸಿದ್ದಾರೆ. ಅವರ ಸೂಚನೆಯಂತೆ ನಿಜವಾದ ಹೆಸರಿಗೆ ಬದಲಿಗೆ ಸಿಸಿ-1 ಎಂದು ಗುಪ್ತಾ ಅವರು ಸೇವ್ ಮಾಡಿಕೊಂಡಿದ್ದಾರೆ. ಕೆಲವು ನಿಮಿಷಗಳ ಬಳಿಕ ಮತ್ತೊಂದು ಸಂದೇಶದಲ್ಲಿ ಸಿಸಿ-1 'ನ್ಯೂಯಾರ್ಕ್ನಲ್ಲಿ ಒಂದು ಟಾರ್ಗೆಟ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಮತ್ತೊಂದು ಟಾರ್ಗೆಟ್ ಇದೆ ಎಂದು ಗುಪ್ತಾಗೆ ತಿಳಿಸಿದ್ದಾರೆ ಎಂದು ಪ್ರಾಸಿಕ್ಯೂಟರ್, ದೋಷಾರೋಪಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.