ನ್ಯೂಯಾರ್ಕ್: ಫ್ಲಾರಿಡಾ ಮೂಲದ ಹಿಂದೂ ಯೂನಿವರ್ಸಿಟಿ ಆಫ್ ಅಮೆರಿಕ, ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಹಿಂದೂ ಧರ್ಮ ಕುರಿತು ಖೇರ್ ಅವರು ಕೈಗೊಂಡ ಅಧ್ಯಯನವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ಗೌರವ ಪದವಿ ಪ್ರದಾನ ಮಾಡಲಾಯಿತು ಎಂದು ಮೂಲಗಳು ಹೇಳಿವೆ.

‘ಈ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಕ್ಕೆ ಸಂತಸವಾಗಿದೆ. ನನ್ನ ಜೀವನದ ಪ್ರಮುಖ ಸಾಧನೆಗಳಲ್ಲಿ ಈ ಪದವಿಗೆ ಅತ್ಯಂತ ಎತ್ತರದ ಸ್ಥಾನವಿದೆ. ಜಗತ್ತಿನ ಅತ್ಯಂತ ಪುರಾತನ ಸಂಸ್ಕೃತಿಯಾಗಿರುವ ಹಿಂದೂ ಧರ್ಮದ ತತ್ವಜ್ಞಾನ ಕುರಿತು ಮಾತನಾಡಲು ಈ ಪದವಿ ನನಗೆ ವೇದಿಕೆ ಒದಗಿಸಿದಂತಾಗಿದೆ’ ಎಂದು ಖೇರ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.