ಬೈರೂತ್: ಪೂರ್ವ ಸಿರಿಯಾದಲ್ಲಿ ಅಮೆರಿಕದ ಯೋಧರು ಇರುವ ನೆಲೆಯ ಮೇಲೆ ಭಾನುವಾರ ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕ ಬೆಂಬಲಿತ ಆರು ಮಂದಿ ಕುರ್ದಿಶ್ ಹೋರಾಟಗಾರರು ಮೃತಪಟ್ಟಿದ್ದಾರೆ. ಇರಾನ್ ಬೆಂಬಲಿತ ಬಂಡುಕೋರರ ಮೇಲೆ ಅಮೆರಿಕವು ವಾರಾಂತ್ಯದಲ್ಲಿ ಪ್ರತಿದಾಳಿ ನಡೆಸಿದ ನಂತರದಲ್ಲಿ ನಡೆದಿರುವ ಮಹತ್ವದ ದಾಳಿ ಇದಾಗಿದೆ. ಇರಾನ್ ಬೆಂಬಲಿತ ಬಂಡುಕೋರರು ಅಮೆರಿಕದ ಯೋಧರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸುತ್ತಿದ್ದಾರೆ.

ಸಿರಿಯಾದ ಪೂರ್ವ ಪ್ರಾಂತ್ಯದಲ್ಲಿ ಇರುವ ತರಬೇತಿ ನೆಲೆಯ ಮೇಲೆ ದಾಳಿ ನಡೆದಿದೆ. ಸಿರಿಯಾ ಆಡಳಿತದ ಬೆಂಬಲವಿರುವ ಸೈನಿಕರು ಈ ದಾಳಿ ನಡೆಸಿದ್ದಾರೆ ಎಂದು ಅಮೆರಿಕದ ಬೆಂಬಲ ಇರುವ ‘ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್’ ಹೇಳಿಕೆಯಲ್ಲಿ ತಿಳಿಸಿದೆ. ಈ ದಾಳಿಯಲ್ಲಿ ಅಮೆರಿಕದ ಯೋಧರು ಮೃತಪಟ್ಟಿರುವ ವರದಿಗಳು ಇಲ್ಲ.

ದಾಳಿಯ ಹೊಣೆ ಹೊತ್ತು ಇರಾನ್ ಬೆಂಬಲಿತ ಬಂಡುಕೋರರು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದೇ ಗುಂಪು ಜನವರಿ ಕೊನೆಯಲ್ಲಿ ಜೋರ್ಡಾನ್‌ನ ಮರುಭೂಮಿಯನಲ್ಲಿನ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಅಮೆರಿಕದ ಮೂವರು ಯೋಧರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಅಮೆರಿಕದ ಮಿಲಿಟರಿಯು, ಇರಾಕ್‌ನ ಪಶ್ಚಿಮ ಭಾಗ ಮತ್ತು ಸಿರಿಯಾದ ಪೂರ್ವ ಭಾಗದಲ್ಲಿ ಇರುವ ಬಂಡುಕೋರರ ಮೇಲೆ ದಾಳಿ ನಡೆಸಿದೆ. ಯೆಮನ್‌ನ ಹುಥಿ ಬಂಡುಕೋರರ ಮೇಲೆಯೂ ದಾಳಿ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.