ಬೆಂಗಳೂರು: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ ವೇಳೆ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಲ್ಲದೇ ಸೀರೆ, ಒಳಉಡುಪುಗಳನ್ನೂ ಹೊತ್ತುಕೊಂಡು ಹೋಗಿದ್ದಾರೆ.

ಈ ಕುರಿತ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೆಲವರು ಸೀರೆಯನ್ನು ದೋಚಿ ಅವುಗಳನ್ನು ಉಟ್ಟುಕೊಂಡು ಸಂಭ್ರಮಿಸುತ್ತಾ ಸಾಗಿದ್ದಾರೆ.ಇನ್ನೂ ಕೆಲವರು ಶೇಕ್ ಹಸೀನಾ ಅವರ ಒಳಉಡುಪುಗಳನ್ನೂ ದೋಚಿ ಅವುಗಳನ್ನು ಪ್ರದರ್ಶಿಸುತ್ತಾ ವಿಜೃಂಭಿಸಿದ್ದಾರೆ.

ಗಣಭವನದ ಕೊಳದಲ್ಲಿ ಈಜಾಡಿ, ನಿವಾಸದಿಂದ ಸೋಫಾ, ಕುರ್ಚಿ, ಹೂಕುಂಡಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಒಬ್ಬ ಪ್ರತಿಭಟನಕಾರ ಲಿಪ್‌ಸ್ಟಿಕ್ ಸಹ ತೆಗೆದುಕೊಂಡು ಹೋಗಿದ್ದಾನೆ. ‘ನಮ್ಮ ಹೋರಾಟದ ಮೂಲಕ ನಿರಂಕುಶಾಧಿಕಾರಿಯನ್ನು ತೊಲಗಿಸಿದ್ದೇವೆ. ಅವರು ಈ ಲಿಪ್‌ಸ್ಟಿಕ್ ಅನ್ನು ಬಳಸುತ್ತಿದ್ದರು. ಹೋರಾಟದ ಸ್ಮರಣೆಗೆ ಇದನ್ನು ತೆಗೆದುಕೊಂಡಿದ್ದೇನೆ’ ಎಂದು ಆ ವ್ಯಕ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಫ್ರಿಪ್ರೆಸ್ ಜರ್ನಲ್ ವೆಬ್‌ಸೈಟ್ ವರದಿ ಮಾಡಿದೆ.

ಈ ಬೆಳವಣಿಗೆಗಳ ಹಿಂದೆಯೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಕಾರ್–ಉಝ್–ಝಮಾನ್, ‘ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸೇನೆ ಮಧ್ಯಂತರ ಸರ್ಕಾರ ರಚಿಸಲಿದೆ. ನಾನು ದೇಶದ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ಅದಕ್ಕೆ ಸಹಕರಿಸಿ’ ಎಂದು ಪ್ರಕಟಿಸಿದರು.

‘ದೇಶದ ರಾಜಕೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಸೇನೆ ವಹಿಸಿಕೊಳ್ಳುತ್ತದೆ ಎಂಬುದನ್ನು ಅವರಿಗೆ ತಿಳಿಸಲಾಗಿದೆ. ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಗುಂಡಿನ ದಾಳಿ ನಡೆಸದಂತೆ ಸೇನೆ ಮತ್ತು ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಹಸೀನಾ ರಾಜೀನಾಮೆ ಕುರಿತು ವಕಾರ್ ಘೋಷಿಸಿದ ಬಳಿಕ, ಜನರು ವಿಜಯೋತ್ಸವ ಆಚರಿಸಿ, ಸಂಭ್ರಮಿಸಿದರು.
.Bangla Unrest | ಭಾರತೀಯ ಸಾಂಸ್ಕೃತಿಕ ಕೇಂದ್ರ ಧ್ವಂಸ: 4 ದೇಗುಲಗಳಿಗೆ ಹಾನಿ.Bangla Unrest: ಇಂದಿರಾ ಗಾಂಧಿ ಸಾಂಸ್ಕೃತಿಕ ಕೇಂದ್ರ, ಹಿಂದೂ ದೇವಾಲಯಗಳಿಗೆ ಹಾನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.