ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಭಾರತೀಯ ಮೂಲದ ಅಮೆರಿಕನ್ನರನ್ನು ಸೆಳೆಯಲು 14 ಭಾಷೆಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಪ್ರಚಾರ ಸಮಿತಿ ತಿಳಿಸಿದೆ.

ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಎರಡೂ ಪಕ್ಷಗಳುಭಾರತದ ವೈವಿಧ್ಯತೆಯನ್ನು ಪ್ರತಿಬಿಂಬಿಸಲು ಭಾರತೀಯ ಭಾಷೆಗಳನ್ನು ಬಳಸುತ್ತಿವೆ. ಈ ಬಾರಿ ಡೆಮಾಕ್ರಟಿಕ್ ಪಕ್ಷವು ‘ಅಮೆರಿಕ ಕಾ ನೇತಾ ಕೇಸಾ ಹೋ, ಜೋ ಬಿಡನ್ ಜೇಸಾ ಹೋ’(ಅಮೆರಿಕದ ನೇತಾ ಹೇಗಿರಬೇಕು, ಜೋ ಬಿಡೆನ್ ಹಾಗಿರಬೇಕು) ಎಂಬ ಘೋಷವಾಕ್ಯವನ್ನು ತನ್ನದಾಗಿಸಿಕೊಂಡಿದೆ.

2014ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಘೋಷಣೆ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಇದರಿಂದ ಪ್ರೇರಣೆಗೊಂಡು2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್, ‘ ಅಬ್ ಕೀ ಟ್ರಂಪ್ ಸರ್ಕಾರ್’ ಎಂಬ ಘೋಷವಾಕ್ಯವನ್ನು ಬಳಸಿದ್ದರು. ಇದು ಟ್ರಂಪ್ಗೆ ಬಹುದೊಡ್ಡ ಸಫಲತೆಯನ್ನು ನೀಡಿತ್ತು.

ಇದೀಗ ಜೋ ಬಿಡೆನ್ ಅವರು ಭಾರತೀಯ ಅಮೆರಿಕನ್ನರನ್ನು ಸೆಳೆಯಲು ಭಾಷಾ ಅಸ್ತ್ರವನ್ನು ಬಳಸುತ್ತಿದ್ದಾರೆ.

ಬಿಡೆನ್ ಅವರು ಭಾರತೀಯ ಮೂಲದ ಅಮೆರಿಕನ್ನರನ್ನು ಅವರದ್ದೇ ಭಾಷೆಯ ಮೂಲಕ ತಲುಪಲು ಇಚ್ಛಿಸುತ್ತಿದ್ದಾರೆ ಎಂದು ಅಧ್ಯಕ್ಷೀಯ ಚುನಾವಣೆಯ ರಾಷ್ಟ್ರೀಯ ವ್ಯವಹಾರ ಸಮಿತಿಯ ಸದಸ್ಯಅಜಯ್ ಭೂತೋರಿಯಾ ತಿಳಿಸಿದರು.

ಭಾರತೀಯ ಅಮೆರಿಕನ್ನರೊಂದಿಗೆಹಿಂದಿ, ಪಂಜಾಬಿ, ತಮಿಳು, ತೆಲುಗು, ಬೆಂಗಾಲಿ, ಉರ್ದು, ಕನ್ನಡ, ಮಲಯಾಳಂ, ಒರಿಯಾ, ಮರಾಠಿ ಮತ್ತು ನೇಪಾಳಿ ಭಾಷೆಗಳಲ್ಲಿ ನೇರ ಮಾತುಕತೆ ನಡೆಸಲುಬಿಡನ್ ಅವರು ಏಷಿಯನ್ ಅಮೆರಿಕನ್, ಫೆಸಿಫಿಕ್ ಐಲ್ಯಾಂಡರ್(ಎಎಪಿಐ) ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಚುನಾವಣೆಯನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಆಕರ್ಷಕ ಘೋಷ ವಾಕ್ಯಗಳು, ಬಾಲಿವುಡ್ ಹಾಡುಗಳನ್ನು ಬಳಸಿ ರ್ಯಾಲಿಗಳನ್ನು ನಡೆಸಲಾಗುವುದು. ಅದೇ ರೀತಿಯಲ್ಲಿ ನಾವು ಭಾರತೀಯ ಅಮೆರಿಕನ್ನರಲ್ಲಿ ಉತ್ಸಾಹವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಎದುರಾಳಿಯಾಗಿಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.