ನ್ಯೂಯಾರ್ಕ್: ‘ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಕೋನದಿಂದ ಬಿಜೆಪಿಯು ಜಗತ್ತಿನ ಅತ್ಯಂತ ಪ್ರಮುಖ ರಾಜಕೀಯ ಪಕ್ಷವಾಗಿದೆ’ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಸೋಮವಾರ ಪ್ರಕಟವಾಗಿದ್ದ ‘ಒಪಿನಿಯನ್’ ಅಂಕಣದಲ್ಲಿ ತಿಳಿಸಲಾಗಿದೆ.

‘ಬಿಜೆಪಿಯು ಜಗತ್ತಿನ ಪ್ರಮುಖ ಮೂರು ಪಕ್ಷಗಳೆನಿಸಿರುವ ಇಸ್ರೇಲ್ನ ಲಿಕುದ್, ಚೀನಾದ ಕಮ್ಯುನಿಸ್ಟ್ ಹಾಗೂ ಈಜಿಪ್ಟ್ನ ಮುಸ್ಲಿಂ ಬ್ರದರ್ಹುಡ್ನ ಅತ್ಯಂತ ಗಮನಾರ್ಹ ತತ್ವಗಳನ್ನು ಒಳಗೊಂಡಿದೆ’ ಎಂದು ಅಮೆರಿಕದ ಶಿಕ್ಷಣ ತಜ್ಞ ವಾಲ್ಟರ್ ರಸೆಲ್ ಮೀಡ್ ಎಂಬುವರು ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

‘ಮುಸ್ಲಿಂ ಬ್ರದರ್ಹುಡ್ನಂತೆ ಬಿಜೆಪಿಯು ಪಾಶ್ಚಿಮಾತ್ಯ ಉದಾರವಾದದ ಹಲವು ವಿಚಾರಗಳು ಹಾಗೂ ಆದ್ಯತೆಗಳನ್ನು ತಿರಸ್ಕರಿಸುತ್ತದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಹಾಗೆ ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಬಯಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರೆಸ್ಸೆಸ್ಸ್) ಬಹುಶಃ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಂಘಟನೆಯಾಗಿದೆ. ಚೀನಾದೊಂದಿಗಿನ ಬಿಕ್ಕಟ್ಟು ಉಲ್ಬಣಿಸಿದಂತೆಲ್ಲಾ ಅಮೆರಿಕವು ಭಾರತವನ್ನು ತನ್ನ ಆರ್ಥಿಕ ಹಾಗೂ ರಾಜಕೀಯ ಪಾಲುದಾರನನ್ನಾಗಿ ಮಾಡಿಕೊಳ್ಳಲು ಬಯಸುತ್ತಿದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.