ಲಂಡನ್: ಬ್ರಿಟನ್ ಸಂಸತ್ ಅನ್ನು ಅಕ್ಟೋಬರ್ 14ರವರೆಗೆ ಅಮಾನತಿನಲ್ಲಿ ಇಡುವಂತೆ ಪ್ರಧಾನಿ ಬೋರಿಸ್ ಜಾನ್ಸ್ನ್ ಅವರು ರಾಣಿ ಎರಡನೇ ಎಲಿಜಬೆತ್ ಅವರಿಗೆ ಮನವಿ ಮಾಡಿದ್ದಾರೆ.

ಬೇಸಿಗೆ ವಿರಾಮದ ಬಳಿಕ ಸೆಪ್ಟೆಂಬರ್ 9ರಿಂದ ಸಂಸತ್ ಅಧಿವೇಶನ ಆರಂಭವಾಗಬೇಕಾಗಿತ್ತು. ಈಗ ಸಂಸತ್ ಅನ್ನು ಅಮಾನತುಗೊಳಿಸುವ ಕುರಿತು ಜಾನ್ಸನ್ ಅವರು ಎಲಿಜಬೆತ್ ಅವರ ಜತೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ.

ಈ ಬಗ್ಗೆ ಬುಧವಾರ ಎಲ್ಲ ಸಂಸದರಿಗೂ ಪತ್ರ ಬರೆದಿರುವ ಜಾನ್ಸನ್, ಅಕ್ಟೋಬರ್ 14ರಂದು ಸಂಸತ್ ಅಧಿವೇಶನ ಪುನರ್ ಆರಂಭಿಸಲು ಉದ್ದೇಶಿಸಲಾಗಿದೆ. ಅದೇ ದಿನರಾಣಿ ಎಲಿಜಬೆತ್ ಅವರು ಭಾಷಣ ಮಾಡಲಿದ್ದು, ಸರ್ಕಾರದ ನೀತಿ ನಿರೂಪಣೆಗಳನ್ನು ವಿವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಬ್ರೆಕ್ಸಿಟ್ ಸೇರಿದಂತೆ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಸಂಸದರು ಚರ್ಚಿಸಲು ಅವಕಾಶ ನೀಡದಿರಲು ಜಾನ್ಸನ್ ಈ ಕ್ರಮಕೈಗೊಂಡಿದ್ದಾರೆ. ಜತೆಗೆ, ಯಾವುದೇ ಒಪ್ಪಂದ ಇಲ್ಲದೆಯೂ ಬ್ರೆಕ್ಸಿಟ್ನಿಂದ ಹೊರಬರುವುದನ್ನು ತಡೆಯಲು ಸಂಸದರಿಗೆ ಸಾಧ್ಯವಾಗುವುದಿಲ್ಲಎಂದುವಿಶ್ಲೇಷಿಸಲಾಗಿದೆ.

‘ಅಕ್ಟೋಬರ್ 17 ಮತ್ತು 18ರಂದು ನಡೆಯುವ ಐರೋಪ್ಯ ಮಂಡಳಿಯ ಸಭೆಗೆ ಮುನ್ನ ಮತ್ತು ನಂತರ ಸಂಸತ್ ಅಧಿವೇಶನ ನಡೆಯುವುದು ಮುಖ್ಯ. ಇದರಿಂದ, ಅಕ್ಟೋಬರ್ 31ಕ್ಕೆ ಮುನ್ನ ಐರೋಪ್ಯ ಒಕ್ಕೂಟದಿಂದ ಹೊರ ಬರುವ ಸಂಬಂಧ ವಿಧೇಯಕಕ್ಕೆ ಅನುಮೋದನೆ ಪಡೆಯಲು ಅನುಕೂಲವಾಗುತ್ತದೆ’ ಎಂದು ಜಾನ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಸತ್ ಅನ್ನು ಅಮಾನತಿನಲ್ಲಿರಿಸುವ ನಿರ್ಧಾರ ಈಗಾಗಲೇ ವಿವಾದಕ್ಕೀಡಾಗಿದೆ. ಐರೋಪ್ಯ ಒಕ್ಕೂಟದಿಂದ ಹೊರಬರುವುದರಿಂದ ಉಂಟಾಗುವ ಹಾನಿಯನ್ನು ತಡೆಯಲು ಸಂಸದರು ಕೈಗೊಳ್ಳುವ ಶಾಸನಾತ್ಮಕ ಕ್ರಮಗಳಿಗೆ ತಡೆಯೊಡ್ಡುತ್ತದೆ ಎಂದು ಟೀಕಿಸಲಾಗಿದೆ.

‘ಐರೋಪ್ಯ ಒಕ್ಕೂಟದಿಂದ ಅಕ್ಟೋಬರ್ 31ರಂದು ಹೊರಬರಲು ಜಾನ್ಸನ್ ಉದ್ದೇಶಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಒಪ್ಪಂದ ಇಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಬಂದರೆ ಆರ್ಥಿಕವಾಗಿ ಬ್ರಿಟನ್ಗೆ ಹಾನಿಯಾಗಲಿದೆ ಮತ್ತು ಆರ್ಥಿಕ ಹಿಂಜರಿತ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.