ನವದೆಹಲಿ: ರಷ್ಯಾ ನಿರ್ಮಿತ ಎಸ್‌ಯು–30ಎಂಕೆಐ ಫೈಟರ್ ಜೆಟ್‌ಗಳಿಂದ ಚಿಮ್ಮಿದ ಬ್ರಹ್ಮೋಸ್ ಕ್ಷಿಪಣಿ ನಿಗದಿತ ಗುರಿ ತಲುಪುವ ಮೂಲಕ ಶತ್ರು ಪಾಳೆಯ ಮೇಲೆ ವೈಮಾನಿಕ ಪ್ರಹಾರ ನಡೆಸುವ ವಾಯುಪಡೆ ಬಲಕ್ಕೆ ಶಕ್ತಿ ತುಂಬಿದೆ.

ದೇಶದ ದಕ್ಷಿಣ ಭಾಗದಲ್ಲಿರುವ ವಾಯುನೆಲೆಯಿಂದ ಬುಧವಾರ ನಭಕ್ಕೆ ಹಾರಿದ ಎಸ್‌ಯು–20ಎಂಕೆಐ, 300 ಕಿ.ಮೀ ದೂರ ಕ್ರಮಿಸಿ, ಕಾರ್‌ನಿಕೋಬಾರ್ ದ್ವೀಪದ ಭೂಪ್ರದೇಶದಲ್ಲಿ ಗುರುತಿಸಲಾಗಿದ್ದ ಗಮ್ಯ ಸ್ಥಾನಕ್ಕೆ ಕ್ಷಿಪಣಿಯನ್ನು ಹಾರಿಸಿತು. ವಾಯುಪಡೆ ಅಧಿಕಾರಿಗಳಲ್ಲದೇ, ಡಿಆರ್‌ಡಿಒ ಹಾಗೂ ಬ್ರಹ್ಮೋಸ್ ಏರೋಸ್ಪೇಸ್‌ನ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಈ ಯಶಸ್ವಿ ಕಾರ್ಯಾಚರಣೆಗೆ ಸಾಕ್ಷಿಯಾದರು.

ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂಬ ವಾಯಪಡೆಯ ನಿರ್ಧಾರ ಈ ಪರೀಕ್ಷೆಯಿಂದ ಮತ್ತಷ್ಟೂ ಗಟ್ಟಿಗೊಳ್ಳಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಸಾಗರದಲ್ಲಿರುವ ಗುರಿ ತಲುಪಬಲ್ಲ ಹಾಗೂ ನೆಲದಲ್ಲಿನ ಗುರಿ ಮುಟ್ಟಬಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನೆರವೇರಬೇಕು ಎಂಬುದು ವಾಯುಪಡೆಯ ಬೇಡಿಕೆ. ಹೀಗಾಗಿ ತಿಂಗಳೊಳಗಾಗಿ ಮತ್ತೊಂದು ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ನಂತರ 300 ಕಿ.ಮೀ. ದೂರ ಕ್ರಮಿಸುವ ಈ ಕ್ಷಿಪಣಿ ವಾಯುಪಡೆ ಬತ್ತಳಿಕೆ ಸೇರಲಿದೆ’ ಎಂದು ಬ್ರಹ್ಮೋಸ್ ಏರೋಸ್ಪೇಸ್ ಅಧಿಕಾರಿಗಳು ಹೇಳಿದರು.

ಸದ್ಯ, ನೌಕಾಪಡೆಯ 11 ಯುದ್ಧನೌಕೆಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಳವಡಿಸಿದ್ದರೆ, ಸೇನೆಯ ಮೂರು ರೆಜಿಮೆಂಟ್‌ಗಳ ಬಳಿ ಈ ಪ್ರಬಲ ಕ್ಷಿಪಣಿ ವ್ಯವಸ್ಥೆ ಇದೆ. ವಾಯುಪಡೆಯೂ ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊಂದಿದರೆ, ಅತಿವೇಗದಲ್ಲಿ ಗುರಿ ತಲುಪಬಲ್ಲ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ವಿಶ್ವದ ಮೊದಲ ಮತ್ತು ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.