ಲಂಡನ್: ಬ್ರಿಟನ್‌ನ ರಾಜಮನೆತನದ ಹ್ಯಾರಿ ಮತ್ತು ಮೇಘನ್ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಈ ವಿಷಯವನ್ನು ಲಂಡನ್ ಅರಮನೆಯ ಪತ್ರಿಕಾ ಕಾರ್ಯದರ್ಶಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ದಂಪತಿಗಳ ಎರಡನೇ ಮಗು ಇದಾಗಿದ್ದು, ಮಗುವಿಗೆ ಲಿಲ್ಲಿಬೆಟ್ (ಲಿಲ್ಲಿ ಡಯನಾ) ಎಂದು ನಾಮಕರಣ ಮಾಡಲಾಗಿದೆ. ಜೂನ್ 4 ರಂದು ಬೆಳಿಗ್ಗೆ ಅಮೆರಿಕದ ಕ್ಯಾಲಿಪೋರ್ನಿಯಾದ ಸಂತಾ ಬಾರ್ಬರಾ ಕಾಟೇಜ್ ಆಸ್ಪತ್ರೆಯಲ್ಲಿ 11.40 ಕ್ಕೆ ಮಗುವಿನ ಜನನವಾಗಿದೆ. ಈ ವೇಳೆ ತಂದೆ ಹ್ಯಾರಿ ಕೂಡ ಹಾಜರಿದ್ದರು. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಗಳು ಲಿಲ್ಲಿಯ ಆಗಮನದಿಂದ ನಮಗೆ ಅತೀವ ಸಂತೋಷವಾಗಿದೆ. ನಾವು ಊಹಿಸಿದ್ದಕಿಂತಲೂ ಹೆಚ್ಚು ಪ್ರಪಂಚದಾದ್ಯಂತ ನಮಗೆ ದಕ್ಕಿದ ಪ್ರೀತಿ ಮತ್ತ ಪ್ರಾರ್ಥನೆಗಳಿಗೆ ಕೃತಜ್ಞರಾಗಿರುತ್ತೇವೆ ಎಂದು ಪ್ರಿನ್ಸ್ ಹ್ಯಾರಿ ಮತ್ತು ಡಚ್‌ಸ್ ಆಫ್ ಸುಸೆಕ್ಸ್ ಮೇಘನ್ ಅವರು ತಿಳಿಸಿದ್ದಾರೆ.

ಈ ದಂಪತಿಗೆ 2019 ರಲ್ಲಿ ಮೊದಲ ಗಂಡು ಮಗು ಆರ್ಚಿ ಜನನವಾಗಿತ್ತು.

ಇದನ್ನೂ ಓದಿ:ಇಸ್ರೇಲ್ನಲ್ಲಿ ಅಲ್ ಜಜೀರಾ ಪತ್ರಕರ್ತೆ ಬಂಧನ: ವಿರೋಧದ ನಂತರ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.