ಲಂಡನ್: ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆ ಅವರು 2024ನೇ ಸಾಲಿನ ಪ್ರತಿಷ್ಠಿತ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹53.75 ಲಕ್ಷ ನಗದು (50 ಸಾವಿರ ಪೌಂಡ್) ಒಳಗೊಂಡಿದೆ.

ಬಾಹ್ಯಾಕಾಶ ಕೇಂದ್ರದ ಕಥನವುಳ್ಳ ಅವರ ‘ಆ್ಯಂಬಿಷಿಯಸ್ ಅಂಡ್ ಬ್ಯೂಟಿಫುಲ್’ ಮತ್ತು ‘ಆರ್ಬಿಟಲ್‘ ಕೃತಿಗಳಿಗಾಗಿ ಪ್ರಶಸ್ತಿಯು ಸಂದಿದೆ. ಪ್ರಶಸ್ತಿಗೆ ಅಂತಿಮಗೊಳಿಸಲಾಗಿದ್ದ ಪಟ್ಟಿಯಲ್ಲಿ ಲೇಖಕಿಯರೇ ಪ್ರಾಬಲ್ಯ ಮೆರೆದಿದ್ದರು. ಅಂತಿಮವಾಗಿ ಲೇಖಕಿಗೇ ಈ ವರ್ಷದ ಪ್ರಶಸ್ತಿ ಗೌರವವೂ ಸಂದಿದೆ.

‘ಆರ್ಬಿಟಲ್’ ಈ ವರ್ಷ ಬ್ರಿಟನ್ನಲ್ಲಿ ಹೆಚ್ಚು ಮಾರಾಟವಾದ ಕೃತಿ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಆರು ಗಗನಯಾತ್ರಿಗಳ ಒಂದು ದಿನದ ಬದುಕನ್ನು ಈ ಕೃತಿ ಕಟ್ಟಿಕೊಟ್ಟಿದೆ. ಈ ‘ಒಂದು ದಿನ’ದಲ್ಲಿ ಗಗನಯಾತ್ರಿಗಳು 16 ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಕಂಡಿರುತ್ತಾರೆ.

ಮಂಗಳವಾರ ಲಂಡನ್ನ ಓಲ್ಡ್ ಬಿಲ್ಲಿಂಗ್ಸ್ಗೇಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಲಾಯಿತು. ‘ಆರ್ಬಿಟಲ್’ ಬಿಗಿಯಾದ ನಿರೂಪಣೆಯ ಕೃತಿ. ಈ ಕೃತಿಯು ಓದುಗರನ್ನು ಭೂಮಿಯ ಕೌತುಕಗಳತ್ತ ಸೆಳೆಯುವಂತಿದೆ’ ಎಂದು ತೀರ್ಪುಗಾರರು ಬಣ್ಣಿಸಿದರು.

ಲೇಖಕಿ ಹಾರ್ವೆ ಅವರು ‘ಭೂಮಿಯ ಪರವಾಗಿ ಧ್ವನಿ ಎತ್ತುವ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ‘ಬಾಹ್ಯಾಕಾಶ ಒಂದು ಗ್ರಾಮ. ಅಲ್ಲಿನ ಸೌಂದರ್ಯ, ಬೆರಗನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಕೃತಿ ಎಂದೇ ನಾನು ಅದನ್ನು ಪರಿಗಣಿಸಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.