ಲಂಡನ್: ಖ್ಯಾತ ಸಂಗೀತಗಾರ, ಭಾರತೀಯ ಬ್ರಿಟನ್ ಪ್ರಜೆ ನಿತಿನ್ ಸಾಹ್ನಿ ಅವರನ್ನು 2024ನೇ ಸಾಲಿನ ಬೂಕರ್ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ‘ವಿಶ್ವದ ಪ್ರತಿಷ್ಠಿತ ಪ್ರಶಸ್ತಿಯ ಮುಂದಿನ ವರ್ಷದ ವಿಜೇತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸ್ಥಾನ ನೀಡಿರುವುದು ನನಗೆ ಗೌರವದ ಸಂಗತಿ’ ಎಂದು ಹೇಳಿಕೊಂಡಿದ್ದಾರೆ.

50 ವರ್ಷದ ನಿತಿನ್ ಅವರು, ಸಲ್ಮಾನ್ ರಶ್ದಿ ಅವರ ಬೂಕರ್ ಪ್ರಶಸ್ತಿ ಪುರಸ್ಕೃತ ಕೃತಿ ‘ಮಿಡ್‌ನೈಟ್ಸ್ ಚಿಲ್ಡ್ರನ್’ ರಂಗಭೂಮಿಗೆ ಅಳವಡಿಸಿದಾಗ ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು.

ಕಾದಂಬರಿಕಾರ್ತಿ ಝಂಪಾ ಲಹಿರಿ ಅವರ ‘ದಿ ನೇಮ್‌ಸೇಕ್’ ಕೃತಿ ಆಧಾರಿತ ಚಿತ್ರ ಮತ್ತು ಶೇಖರ್ ಕಪೂರ್ ನಿರ್ದೇಶನದ ‘ವಾಟ್ಸ್ ಲವ್ ಗಾಟ್ ಟು ಡು ವಿತ್ ಇಟ್’ ಚಿತ್ರಕ್ಕೂ ನಿತಿನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

2024ರ ಬೂಕರ್ ಪ್ರಶಸ್ತಿ ವಿಜೇತರ ಹೆಸರನ್ನು ನವೆಂಬರ್‌ನಲ್ಲಿ ಘೋಷಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.