ಹಾಂಗ್‌ಕಾಂಗ್: ವೀರ್ಯ, ಅಂಡಾಣು ಮಾರಾಟ ಮತ್ತು ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸುವ ಫಲವಂತಿಕೆ ಕೇಂದ್ರಗಳ ಮೇಲೆ ದಾಳಿ ಆರಂಭಿಸಿರುವ ಚೀನಾ, ಕಾನೂನಿನ ಪ್ರಕಾರ ಅನುಮತಿ ನೀಡಿದ ಕೇಂದ್ರಗಳಲ್ಲಿ ವಿವಾಹಿತೆಯರು ಮಾತ್ರ ಇಂಥ ಸೌಕರ್ಯಗಳನ್ನು ಪಡೆಯಬೇಕು ಎಂದು ಹೇಳಿದೆ.

ಸಾರ್ವಜನಿಕ ಹಿತಾಸಕ್ತಿಯ ಭಾಗವಾಗಿ ಆರು ತಿಂಗಳ ಕಾಲ ಇಂಥ ಅನಧಿಕೃತ ಕೇಂದ್ರಗಳ ಮೇಲೆ ದಾಳಿ ನಡೆಸುವ ಅಭಿಯಾನವನ್ನು ಚೀನಾ ಆರಂಭಿಸಿದೆ. ಫಲವಂತಿಕೆ ಪಡೆಯಲು ದೇಶದಲ್ಲಿ 543 ಮಾನ್ಯತೆ ಪಡೆದ ವೈದ್ಯಕೀಯ ಕೇಂದ್ರಗಳಿವೆ. ಗರ್ಭಧರಿಸಲಿಚ್ಛಿಸುವವರು ಈ ಕೇಂದ್ರಗಳಲ್ಲಿ ಮಾತ್ರ ಚಿಕಿತ್ಸೆಗೆ ಒಳಪಡಬಹುದು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

‘ಇತ್ತೀಚಿನ ದಿನಗಳಲ್ಲಿ ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡುವ ಅನಧಿಕೃತ ಕೇಂದ್ರಗಳು ಅಲ್ಲಲ್ಲಿ ತಲೆ ಎತ್ತಿವೆ. ಮಾನವನ ಫಲವಂತಿಕೆಯ ತಂತ್ರಜ್ಞಾನದಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮವನ್ನು ಸರ್ಕಾರ ಕೈಗೊಂಡಿದೆ. ಇಷ್ಟು ಮಾತ್ರವಲ್ಲ, ಜನನ ಪ್ರಮಾಣ ಪತ್ರಗಳ ಅಕ್ರಮ ಖರೀದಿ ಹಾಗೂ ಮಾರಾಟಗಳು ನಡೆದ ಪ್ರಕರಣಗಳೂ ಕಂಡುಬಂದಿವೆ. ಜತೆಗೆ ಖೊಟ್ಟಿ ದಾಖಲೆ ಸೃಷ್ಟಿಸಿರುವ ಅಕ್ರಮಗಳೂ ನಡೆದಿವೆ. ಹೀಗಾಗಿ ಇವೆಲ್ಲವನ್ನು ತಡೆಯಲು ಜೂನ್‌ನಿಂದ ಡಿಸೆಂಬರ್‌ವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದಿದ್ದಾರೆ.

‘ಇಂಥ ನಕಲಿ ಜನನ ಪ್ರಮಾಣ ಪತ್ರಗಳಿಂದ ಮಹಿಳೆಯರ ಅಕ್ರಮ ಸಾಗಾಣಿಕೆ ಪ್ರಕರಣಗಳೂ ಕಂಡುಬಂದಿವೆ. ಜತೆಗೆ ಇನ್ನಿತರ ಅಪರಾಧ ಚಟುವಟಿಕೆಗಳೂ ನಡೆದಿವೆ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾದಲ್ಲಿ ಸದ್ಯ ವಯಸ್ಸಾದವರ ಸಂಖ್ಯೆ ಏರುತ್ತಿದೆ. ಜತೆಗೆ ವಿವಾಹಿತೆಯರು ಮಾತ್ರ ಕೃತಕ ಗರ್ಭಧಾರಣೆ ತಂತ್ರಜ್ಞಾನದಿಂದ ಚಿಕಿತ್ಸೆ ಪಡೆದು ಮಕ್ಕಳನ್ನು ಪಡೆಯಲು ಅವಕಾಶ ನೀಡಲಾಗಿದೆ. ಆದರೆ ಅವಿವಾಹಿತ ಹಾಗೂ ಒಬ್ಬಂಟಿ ಮಹಿಳೆಯರಿಗೂ ತಮ್ಮ ಅಂಡಾಣುಗಳನ್ನು ಶೇಖರಿಸಿಡಲು ಹಾಗೂ ಕೃತಕ ಗರ್ಭಧಾರಣೆ ಚಿಕಿತ್ಸೆಗೆ ಒಳಗಾಗಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ರಾಜಕೀಯ ಸಲಹೆ ನೀಡುವ ಸಲಹೆಗಾರರ ತಂಡ ಶಿಫಾರಸು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.