ಇಸ್ಲಾಮಾಬಾದ್: ಪಾಕಿಸ್ತಾನ ದಲ್ಲಿ ಹಣದುಬ್ಬರವು ಏರಿಕೆಯಾಗಿದೆ. ಏಷ್ಯಾ ಖಂಡದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಅಲ್ಲಿನ ಜನರ ಜೀವನ ನಿರ್ವಹಣೆ ವೆಚ್ಚವು ದುಬಾರಿಯಾಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ (ಎಡಿಬಿ) ವರದಿ ತಿಳಿಸಿದೆ.

2024–25ನೇ ಆರ್ಥಿಕ ವರ್ಷದಲ್ಲಿ ಹಣದುಬ್ಬರವು ಶೇ 25ರಷ್ಟು ಇರಲಿದೆ. ಇಡೀ ಏಷ್ಯಾದಲ್ಲಿಯೇ ಪಾಕಿಸ್ತಾನದಲ್ಲಿ ವಸತಿ, ತೆರಿಗೆ, ಆರೋಗ್ಯ, ಆಹಾರದ ನಿರ್ವಹಣೆ ವೆಚ್ಚವು ಹೆಚ್ಚಿದೆ ಎಂದು ತಿಳಿಸಿದೆ.
ಜಿಡಿಪಿ ಬೆಳವಣಿಗೆಯು ಶೇ 1.9ರಷ್ಟು ಪ್ರಗತಿ ಕಾಣಲಿದೆ. ಇದು ಮ್ಯಾನ್ಮಾರ್, ಅಜೆರ್ಬೈಜಾನ್ ಹಾಗೂ ನೌರು ದೇಶದ ಆರ್ಥಿಕತೆ ಬೆಳವಣಿಗೆಗಿಂತಲೂ ಕಡಿಮೆ ಇದೆ ಎಂದು ಹೇಳಿದೆ.

2025–26ನೇ ಆರ್ಥಿಕ ವರ್ಷದಲ್ಲಿ ಹಣದುಬ್ಬರವು ಶೇ 15ರಷ್ಟು ಇರಲಿದೆ. ಏಷ್ಯಾದ 46 ರಾಷ್ಟ್ರಗಳಿಂದಲೂ ಇದು ಹೆಚ್ಚಿದೆ. ಜಿಡಿಪಿ ಬೆಳವಣಿಗೆಯು ಶೇ 2.8ರಷ್ಟು ಪ್ರಗತಿ ಕಾಣಲಿದೆ ಎಂದು ಎಬಿಡಿ ಮುನ್ನೋಟವನ್ನು ಉಲ್ಲೇಖಿಸಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯುನಲ್ ಪತ್ರಿಕೆ ವರದಿ ಮಾಡಿದೆ. ಕೇಂದ್ರೀಯ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು 2024–25ನೇ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ 21ರಷ್ಟು ಇರಲಿದೆ ಎಂದು ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.