ಲಂಡನ್: ಇಲ್ಲಿನ ವೆಸ್ಟ್ ಮಿನಿಸ್ಟರ್ ಹಾಲ್ನಲ್ಲಿ ಸೋಮವಾರ ಬ್ರಿಟನ್ನ ದೊರೆ ಮೂರನೇ ಚಾರ್ಲ್ಸ್ ಸಂಸತ್ ಅನ್ನು ಉದ್ದೇಶಿಸಿ ಪ್ರಥಮ ಬಾರಿಗೆ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ತಮ್ಮ ಪ್ರೀತಿಯ ತಾಯಿ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ನಿಸ್ವಾರ್ಥ ಕರ್ತವ್ಯಕ್ಕೆ ನಿರ್ವಹಣೆಗೆ ಉದಾಹರಣೆಯಾಗಿದ್ದರು. ಅವರ ಅಮೂಲ್ಯ ತತ್ವಗಳನ್ನು ಎತ್ತಿಹಿಡಿಯುವಲ್ಲಿ ಅವರ ಕರ್ತವ್ಯದ ಮಾದರಿಯನ್ನು ನಾನು ಅನುಸರಿಸುತ್ತೇನೆ’ ಎಂದು ಅವರು ಪ್ರತಿಜ್ಞೆ ಮಾಡಿದರು.

ಸಂಸತ್ತಿನಲ್ಲಿ ಎಲಿಜಬೆತ್ ರಾಣಿ ಅವರಿಗೆ ಸಂತಾಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ನನ್ನ ತಾಯಿ ಚಿಕ್ಕ ವಯಸ್ಸಿನಲ್ಲೇ ದೇಶ ಸೇವೆ ಮತ್ತು ಜನಸೇವೆಗೆ ತಮ್ಮನ್ನು ಮುಡುಪಾಗಿಟ್ಟಿದ್ದರು. ಅಂತೆಯೇ ಸಾಂವಿಧಾನಿಕ ಸರ್ಕಾರದ ಅಮೂಲ್ಯ ತತ್ವಗಳನ್ನು ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದರು. ಬ್ರಿಟನ್ ರಾಜನಾಗಿ ನಾನೂ ಅವರ ಆದರ್ಶಗಳನ್ನು ಪಾಲಿಸುತ್ತೇನೆ’ ಎಂದು ಚಾರ್ಲ್ಸ್ ಹೇಳಿದರು.

ತಮ್ಮ ಭಾಷಣದ ವೇಳೆ ಶೇಕ್ಸ್ಪಿಯರ್ನನ್ನು ಉಲ್ಲೇಖಿಸಿದ ಅವರು, ‘ಶೇಕ್ಸ್ಪಿಯರ್ ಹೇಳಿದಂತೆ ಹಿಂದಿನ ರಾಣಿ ಎಲಿಜಬೆತ್ ಅವರು, ಇತರ ರಾಜಕುಮಾರಿಯರಿಗೆ ಜೀವಂತ ಮಾದರಿಯಾಗಿದ್ದರು’ ಎಂದರು.

ಹೌಸ್ ಆಫ್ ಕಾಮನ್ಸ್ನ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು ಶೋಕ ಸಂದೇಶವನ್ನು ಓದಿದರು. ಬಳಿಕ ಅದನ್ನು ಚಾರ್ಲ್ಸ್ ಅವರಿಗೆ ಹಸ್ತಾಂತರಿಸಲಾಯಿತು.

ಹ್ಯಾರಿ ಗೌರವ: ಬ್ರಿಟನ್ನ ರಾಜಕುಮಾರ ಹ್ಯಾರಿ ಅವರು ಸೋಮವಾರರಾಣಿ ಎರಡನೇ ಎಲಿಜಬೆತ್ ಅವರಿಗೆ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ನೀವು ಮತ್ತು ಅಜ್ಜ ಮತ್ತೆ ಒಂದಾಗಿರುವುದನ್ನು ತಿಳಿದು ನಾವು ಮುಗುಳ್ನಗುತ್ತೇವೆ’ ಎಂದು ಹೇಳಿದ್ದಾರೆ.

‘ನಮ್ಮ ಅಜ್ಜಿ ಅವರ ಅಗಲಿಕೆಯು ನಮಗೆ ಅತೀವ ನೋವನ್ನುಂಟು ಮಾಡಿದೆ. ಅವರೊಂದಿಗಿನ ಬಾಲ್ಯದ ನೆನಪುಗಳನ್ನು ಮರೆಯಲಾಗದ್ದು.ಅವರ ಕರ್ತವ್ಯಬದ್ಧತೆ ಅನೇಕರಿಗೆ ಮಾರ್ಗದರ್ಶನ ನೀಡುವಂತಿತ್ತು. ಅವರು ಜಾಗತಿಕವಾಗಿ ಮೆಚ್ಚುಗೆಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದರು’ ಎಂದೂ ಹ್ಯಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.