ದಾವೋಸ್, ಸ್ವಿಟ್ಜರ್ಲೆಂಡ್ (ಪಿಟಿಐ): ಸ್ವಿಟ್ಜರ್ಲೆಂಡ್‌ನ ದಾವೋಸ್ ದ್ವೀಪವು ವಿಶ್ವ ಆರ್ಥಿಕ ಸಮ್ಮೇಳನದ ವಾರ್ಷಿಕ ಶೃಂಗಸಭೆಗೆ ಸಜ್ಜಾಗಿದ್ದು, ರಕ್ಷಣೆಗಾಗಿ 5,000 ಮಂದಿಯ ಸ್ವಿಸ್ ಮಿಲಿಟರಿ ಪಡೆಯನ್ನು ಅಲ್ಲಿನ ಸ್ಥಳೀಯ ಪೊಲೀಸರೊಂದಿಗೆ ನಿಯೋಜಿಸಲಾಗಿದೆ. ಇದೇ 26ರವರೆಗೆ ಸಮಾವೇಶ ನಡೆಯಲಿದೆ.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಸಮ್ಮೇಳನ ನಡೆದಿರಲಿಲ್ಲ. ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಹಾಗೂ ನಿಯೋಗಗಳಿಂದ ಲಭ್ಯವಾಗಲಿರುವ ಅಧಿಕ ಬಂಡವಾಳ ಹರಿಯುವಿಕೆಗೆ ದಾವೋಸ್ ಪ್ರಜೆಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ. 50 ವರ್ಷಗಳಿಂದ ಆರ್ಥಿಕ ಸಮ್ಮೇಳನದ ಶೃಂಗಸಭೆ ನಡೆದುಕೊಂಡು ಬರುತ್ತಿದೆ.

ಉಕ್ರೇನ್ ಮೇಲಿನ ಆಕ್ರಮಣದಿಂದಾಗಿ ಈ ಬಾರಿಯ ಶೃಂಗಸಭೆಗೆ ರಷ್ಯಾವನ್ನು ಆಮಂತ್ರಿಸಿಲ್ಲ. ಉಕ್ರೇನ್‌ನ ಅಧ್ಯಕ್ಷ ಹಾಗೂ ಹಲವು ನಾಯಕರು ಶೃಂಗಸಭೆಯನ್ನುದ್ಧೇಶಿಸಿ ಮಾತನಾಡಲಿದ್ದಾರೆ.

ಸಮ್ಮೇಳನದಲ್ಲಿ ಭಾರತ ಸರ್ಕಾರ ಸೇರಿದಂತೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನ ಸರ್ಕಾರಗಳು ಪ್ರತ್ಯೇಕವಾಗಿ ಸ್ಥಾಪಿಸಿದ ವೇದಿಕೆಗಳು ಇರಲಿವೆ. ಎಚ್‌ಸಿಎಲ್, ವಿಪ್ರೋದಂತಹ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.