ಅಡಿಸ್ ಅಬಾಬಾ: ಇಥಿಯೋಪಿಯಾದಲ್ಲಿ ಭಾರಿ ವರ್ಷಧಾರೆಯಿಂದ ಉಂಟಾದ ಮಣ್ಣು ಕುಸಿತದಲ್ಲಿ ಕನಿಷ್ಠ 157 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಇಥಿಯೋಪಿಯಾದ ಕೆಂಚೊ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಮಣ್ಣು ಕುಸಿತದಲ್ಲಿ ಮಕ್ಕಳು, ಗರ್ಭಿಣಿಯರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿ ಡಗ್ಮಾವಿ ಅಯೆಲೆ ಹೇಳಿದ್ದಾರೆ.

ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸೋಮವಾರ ಮೃತರ ಸಂಖ್ಯೆ 55 ಇದ್ದರೆ, ಮಂಗಳವಾರ 157ಕ್ಕೇರಿದೆ ಎಂದು ಗೋಫಾ ವಲಯ ಸಂವಹನ ಕಚೇರಿಯ ಮುಖ್ಯಸ್ಥ ಕಸ್ಸಾಹುನ್ ಅಬಯ್ನೆ ತಿಳಿಸಿದ್ದಾರೆ.

ಮಣ್ಣಿನಡಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆದಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಅಯೆಲೆ ಹೇಳಿದರು.

‘ಜನರು ಮಣ್ಣಿನಡಿ ಸಿಲುಕಿರುವುದು ರಕ್ಷಣಾ ಕಾರ್ಯಾಚರಣೆಯ ವೇಳೆ ಗೋಚರಿಸುತ್ತಿದೆ. ನಾಪತ್ತೆಯಾದವರಿಗಾಗಿ ಶೋಧ ನಡೆದಿದೆ’ ಎಂದು ಗೋಫಾದ ವಿಪತ್ತು ನಿರ್ವಹಣೆ ಸಂಸ್ಥೆಯ ನಿರ್ದೇಶಕ ಮಾರ್ಕೊಸ್ ಮೆಲೆಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.