ಲಂಡನ್: 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ಬ್ರಿಟನ್ ಪ್ರಧಾನಿ ತೆರೆಸಾ ಮೇ ವಿಷಾದ ವ್ಯಕ್ತಪಡಿಸಿದ್ದಾರೆ.

ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು 100 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಬ್ರಿಟನ್ ಸಂಸತ್ತಿನಲ್ಲಿ ಮಾತನಾಡಿದ ಮೇ ಈ ಹಿಂದೆ ಅಲ್ಲಿ ನಡೆದಿರುವ ಘಟನೆ ಬಗ್ಗೆ ವಿಷಾದವಿದೆಎಂದಿದ್ದಾರೆ.

ಬ್ರಿಟಿಷರು ಜಾರಿಗೆ ತಂದ ರೌಲಟ್ ಆಕ್ಟ್ ವಿರೋಧಿಸಿ ಪಂಜಾಬ್‌ನ ಧಾರ್ಮಿಕ ಕೇಂದ್ರಗಳಲ್ಲೊಂದಾದ ಅಮೃತಸರದದಲ್ಲಿರುವ ಜಲಿಯನ್ ವಾಲಾಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು 1919, ಏಪ್ರಿಲ್ 13ರಂದು ಸೇರಿದ್ದರು.ಅಂದು ಸಿಖ್ ಧರ್ಮದವರ ಪವಿತ್ರ ದಿನ ಬೈಸಾಖಿ ಆಗಿತ್ತು.

ಶಾಂತಿಯುತವಾಗಿ ನಡೆಯುತ್ತಿದ್ದ ಆ ಸಮಾವೇಶ ಸ್ಥಳಕ್ಕೆ ನುಗ್ಗಿದ ಬ್ರಿಟಿಷ್ ಸೈನ್ಯ ಜನರ ಮೇಲೆ ಗುಂಡು ಹಾರಿಸಿತ್ತು. ಭಾರತೀಯರ ಮೇಲೆ ಗುಂಡು ಹಾರಿಸುವಂತೆ ಸೈನಿಕರ ಆದೇಶ ನೀಡಿದ್ದು ಬ್ರಿಟಿಷ್ ಸೇನಾಧಿಕಾರಿ ಜನರಲ್ ಡಯರ್.ಅಧಿಕೃತ ಮೂಲಗಳ ಪ್ರಕಾರ ಈ ಹತ್ಯಾಕಾಂಡದಲ್ಲಿ ಸಾವಿಗೀಡಾದವರ ಸಂಖ್ಯೆ. ಇನ್ನಿತರ ಮೂಲಗಳ ಪ್ರಕಾರ ಸಾವಿಗೀಡಾವರ ಸಂಖ್ಯೆ 1000ಕ್ಕೂ ಜಾಸ್ತಿ ಇದೆ,.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.