ವಾಷಿಂಗ್ಟನ್: ‘ನನ್ನ ಮನೆಯ ಚಿತ್ರವನ್ನು ಅಬ್ದುಲ್‌ಗೆ ಕಳುಹಿಸಿದ್ದೆ’ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿರುವುದು ಇದೀಗ ಮಿಮ್ಸ್‌ಗಳ ಬಾಯಿಗೆ ಆಹಾರವಾಗಿದೆ.

ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರೊಂದಿಗಿನ ಬಹಿರಂಗ ಚರ್ಚೆ ವೇಳೆ ತಾಲಿಬಾನ್ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದ ಟ್ರಂಪ್, ತಮ್ಮ ಅವಧಿಯಲ್ಲಿ ತಾಲಿಬಾನ್ ನಾಯಕ ಅಬ್ದುಲ್ ಜೊತೆ ಮಾತನಾಡಿರುವುದಾಗಿ ತಿಳಿಸಿದ್ದಾರೆ.

‘ಸ್ನೈಪರ್‌ಗಳನ್ನು ಬಳಸಿ ಅಮೆರಿಕದ ಯೋಧರನ್ನು ತಾಲಿಬಾನಿಗಳು ಹತ್ಯೆ ಮಾಡುತ್ತಿದ್ದ ಸಮಯದಲ್ಲಿ ಅಬ್ದುಲ್ ಜೊತೆ ನಾನು ಮಾತುಕತೆ ನಡೆಸಿದ್ದೆ. ಅಬ್ದುಲ್‌ಗೆ ಇನ್ನು ಮುಂದೆ ಹಾಗೆ ಮಾಡಬೇಡ, ಮಾಡಿದರೆ ನಿನಗೆ ಸಮಸ್ಯೆಯಾಗುತ್ತದೆ’ ಎಂದು ಹೇಳಿದೆ.

‘ನನ್ನ ಮನೆಯ ಚಿತ್ರವನ್ನು ಅಬ್ದುಲ್‌ಗೆ ಕಳುಹಿಸಿದೆ. ನಿಮ್ಮ ಮನೆಯ ಚಿತ್ರವನ್ನು ಏಕೆ ಕಳುಹಿಸಿದ್ದೀರಿ? ಎಂದು ಅಬ್ದುಲ್ ನನಗೆ ಕೇಳಿದ. ಅದನ್ನು ನೀನೇ ಹೇಳಬೇಕು ಎಂದು ನಾನು ಹೇಳಿದೆ. ಅದಾದ ಬಳಿಕ 18 ತಿಂಗಳವರೆಗೆ ಯಾರನ್ನೂ(ಯೋಧರನ್ನು) ಕೊಲ್ಲಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ‘ಅಬ್ದುಲ್’ ಹೇಳಿಕೆ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಮೊಗದಲ್ಲಿಯೂ ನಗೆ ತರಿಸಿತು.

ಇದೀಗ ‘ಅಬ್ದುಲ್’ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದು, ಈ ಕುರಿತ ಹಲವು ತಮಾಷೆಯ ವಿಡಿಯೊಗಳು ಮತ್ತು ಪೋಸ್ಟ್‌ಗಳು ಹರಿದಾಡಿವೆ.

‘ಅಬ್ದುಲ್’ ಯಾರು ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸದಿರುವುದರಿಂದ ಅಫ್ಗಾನಿಸ್ತಾನದ ಮಾಜಿ ತಾನಿಬಾನ್ ಉಪ ಮುಖ್ಯಸ್ಥ ಅಬ್ದುಲ್ ಘನಿ ಬರಾದರ್ ಅವರನ್ನು ಉಲ್ಲೇಖಿಸಿ ಟ್ರಂಪ್ ಮಾತನಾಡಿರಬಹುದು ಎಂದು ಊಹಿಸಲಾಗಿದೆ.

ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಮಂಗಳವಾರ ನಡೆದ ಬಹಿರಂಗ ಚರ್ಚೆಯಲ್ಲಿ ಉಭಯ ನಾಯಕರು ಪರಸ್ಪರ ಮುಖಾಮುಖಿಯಾಗಿದ್ದರು. ಗರ್ಭಪಾತ, ನಿರುದ್ಯೋಗ ಸಮಸ್ಯೆ, ಹಣದುಬ್ಬರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.