ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು 4 ವರ್ಷಗಳ ಬಳಿಕ ಶನಿವಾರ ಸ್ವದೇಶಕ್ಕೆ ಮರಳುವ ನಿರೀಕ್ಷೆಯಿದೆ. 4ನೇ ಬಾರಿಗೆ ಅಧಿಕಾರ ಗಳಿಸುವ ಪ್ರಯತ್ನದಲ್ಲಿ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮುನ್ನಡೆಸಲಿದ್ದಾರೆ.

73 ವರ್ಷದ, ಪಾಕಿಸ್ತಾನ್ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಪಕ್ಷದ ಮುಖಂಡರಾದ ಷರೀಫ್ ಸದ್ಯ ದುಬೈನಲ್ಲಿದ್ದಾರೆ. ಅಲ್ಲಿದ್ದ ಖಾಸಗಿ ವಿಮಾನದಲ್ಲಿ ಪಾಕ್‌ಗೆ ಬರುವ ಸಂಭವವಿದೆ. ನಂತರ ಲಾಹೋರ್‌ನಲ್ಲಿ ನಡೆಯುವ ಪಕ್ಷದ ರ‍್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

ತಮ್ಮ ವಿರುದ್ಧ ಇರುವ ಎರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಕಾರಣ, ಸ್ವದೇಶಕ್ಕೆ ಮರಳುತ್ತಿದ್ದಂತೆ ಅವರನ್ನು ಬಂಧಿಸುವ ಸಾಧ್ಯತೆಗಳು ಇಲ್ಲ. 2020ರಲ್ಲಿ ಸ್ವಯಂ ಗಡೀಪಾರಿಗೆ ಒಳಗಾಗಿದ್ದ ಷರೀಫ್ ಅವರು ಲಂಡನ್‌ಗೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.