ನವದೆಹಲಿ: ವಿದೇಶಿ ನೆಲದಲ್ಲಿ ಮೊದಲ ಐಐಟಿ ಕ್ಯಾಂಪಸ್ ತಾಂಜಾನಿಯಾದ ಝಂಝಿಬಾರ್‌ನಲ್ಲಿ ತೆರೆಯಲಾಗುತ್ತಿದ್ದು, ಈ ವರ್ಷದ ಅಕ್ಟೋಬರ್‌ನಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ನಿರೀಕ್ಷೆ ಇದೆ.

ತಾಂಜಾನಿಯಾ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ಈ ‘ಐತಿಹಾಸಿಕ ಹೆಜ್ಜೆ’ಯು ಭಾರತ ಹೊಂದಿರುವ ಬದ್ಧತೆ ತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ.

ಪೂರ್ವ ಆಫ್ರಿಕಾದ ಕರಾವಳಿಯಲ್ಲಿರುವ ತಾಂಜಾನಿಯಾದ ದ್ವೀಪಸಮೂಹ ಝಂಝಿಬಾರ್‌ನಲ್ಲಿ ಐಐಟಿ-ಮದ್ರಾಸ್ ಕ್ಯಾಂಪಸ್ ಅನ್ನು ಸ್ಥಾಪಿಸಲು, ಸಚಿವ ಎಸ್. ಜೈಶಂಕರ್ ಮತ್ತು ಝಂಝಿಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನಿ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆ ಪತ್ರಕ್ಕೆ (ಎಂಒಯು) ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಜಾಂಜಿಬಾರ್-ತಾಂಜಾನಿಯಾದಲ್ಲಿ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಕ್ಯಾಂಪಸ್ ಅನ್ನು ವಿಶ್ವ ದರ್ಜೆಯ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿ ರೂಪಿಸಲಾಗಿದೆ. ಉದಯೋನ್ಮುಖ, ಜಾಗತಿಕ ಅವಶ್ಯಕತೆಗಳಿಗೆ ಅನುಗುಣವಾದ ಸಾಮರ್ಥ್ಯ ಬೆಳೆಸುವ, ಪ್ರತಿಭೆಗಳನ್ನು ರೂಪಿಸುವ ವಿಶಾಲ ಉದ್ದೇಶವನ್ನು ಇದು ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

‘ಶೈಕ್ಷಣಿಕ ಕಾರ್ಯಕ್ರಮಗಳು, ಪಠ್ಯಕ್ರಮಗಳು, ವಿದ್ಯಾರ್ಥಿಗಳ ಆಯ್ಕೆ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳನ್ನು ಐಐಟಿ ಮದ್ರಾಸ್ ನಿರ್ವಹಿಸಲಿದೆ. ಆದರೆ, ಇದಕ್ಕೆ ತಗುಲುವ ಬಂಡವಾಳ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಝಂಝಿಬಾರ್-ತಾಂಜಾನಿಯಾ ಸರ್ಕಾರ ಭರಿಸಲಿದೆ’ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.