ವಾಷಿಂಗ್ಟನ್: ಅಮೆರಿಕದ ಮೂವರು ಮಾಜಿ ಅಧ್ಯಕ್ಷರು - ರಿಪಬ್ಲಿಕನ್ ಪಕ್ಷದ ಜಾರ್ಜ್ ಬುಷ್ ಮತ್ತು ಡೆಮೊಕ್ರೆಟಿಕ್ ಪಕ್ಷದ ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಅಮೆರಿಕಕ್ಕೆ ಆಗಮಿಸಿರುವ ಅಫ್ಗಾನಿಸ್ತಾನದ ಪ್ರಜೆಗಳಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಒಂದಾಗಿದ್ದಾರೆ.

ಅಫ್ಗಾನಿಸ್ತಾನದಲ್ಲಿ 20 ವರ್ಷಗಳ ಸಂಘರ್ಷದ ಬಳಿಕ ಸೇನೆಯನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಸುಮಾರು 10 ಸಾವಿರ ಅಪ್ಗನ್ ಪ್ರಜೆಗಳು ಅಮೆರಿಕಕ್ಕೆ ಆಗಮಿಸಿದ್ದಾರೆ. ಅಮೆರಿಕ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಜೊತೆ ಕೆಲಸ ಮಾಡಿದ ಇನ್ನೂ ಸಾಕಷ್ಟು ಮಂದಿ ತವರನ್ನು ತೊರೆಯಲಾಗದೆ ಜೀವಭಯದಲ್ಲೇ ಅಫ್ಗನ್ನಲ್ಲಿ ನೆಲೆಸಿದ್ದಾರೆ.

ಮಾಜಿ ಅಧ್ಯಕ್ಷರು ಮತ್ತು ಅವರ ಪತ್ನಿಯರು ವೆಲ್ಕಮ್.ಯುಎಸ್, ವಕಾಲತ್ತು ತಂಡಗಳು, ಅಮೆರಿಕದ ಉದ್ಯಮಿಗಳು ಹಾಗೂ ಮತ್ತಿತರ ಸಂಘಸಂಸ್ಥೆಗಳ ನಾಯಕರ ಜೊತೆ ಕೆಲಸ ಮಾಡಲಿದ್ದಾರೆ. ಅಮೆರಿಕದ ಪ್ರಜೆಗಳು ಅಫ್ಘಾನಿಸ್ತಾನದ ನಿರಾಶ್ರಿತರಿಗೆ ದಾನ ನೀಡಲು ಸುಲಭವಾಗಿಸುವ ನಿಟ್ಟಿನಲ್ಲಿ ಮಂಗಳವಾರ ವೆಬ್ಸೈಟ್ ಒಂದನ್ನು ತೆರೆಯಲಾಗಿದೆ. ಏರ್ಬಿಎನ್ಬಿ ಆ್ಯಪ್ನಂತಹ ಮಾಧ್ಯಮಗಳಿಂದ ಆಶ್ರಯಾರ್ಥಿಗಳಿಗೆ ಮನೆ ಒದಗಿಸುವ ಕೆಲಸಗಳು ಆರಂಭವಾಗಿದೆ ಎಂದು 'ರಾಯಿಟರ್ಸ್' ವರದಿ ಮಾಡಿದೆ.

'ಸುರಕ್ಷಿತ ವಿಶ್ವ ನಿರ್ಮಾಣದ ನಿಟ್ಟಿನಲ್ಲಿ ಸಾವಿರಾರು ಅಫ್ಗನ್ ಪ್ರಜೆಗಳು ನಮ್ಮ ಜೊತೆ ನಿಂತಿದ್ದರು. ಅವರಿಗೀಗ ನಮ್ಮ ಸಹಾಯ ಬೇಕಾಗಿದೆ' ಎಂದು ಬುಷ್ ಮತ್ತು ಅವರ ಪತ್ನಿ ಲೌರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಫ್ಗಾನಿಸ್ತಾನದ ನಿರಾಶ್ರಿತರಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಪಕ್ಷಭೇದ ಮರೆತು ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಗವರ್ನರ್ಗಳು ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.