ವಾಷಿಂಗ್ಟನ್: ಜಾಗತಿಕ ತಾಪಮಾನದ ಬಿಸಿ ನದಿಗಳ ಮೇಲೆ ಆವರಿಸಿಕೊಳ್ಳುವ ಮಂಜುಗಡ್ಡೆಗೂ ತಟ್ಟಿದೆ. ಇದರಿಂದ, ಪರಿಸರ ಮತ್ತು ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಪ್ರತಿ ಒಂದು ಡಿಗ್ರಿ ಸೆಲ್ಸಿಯಸ್ ಜಾಗತಿಕ ತಾಪಮಾನ ಹೆಚ್ಚಳವಾದಾಗ ನದಿ ಮಂಜುಗಡ್ಡೆಯು ಅಪಾರ ಪ್ರಮಾಣದಲ್ಲಿ ಕರಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ’ನೇಚರ್‘ ನಿಯತಕಾಲಿಕೆಯಲ್ಲಿ ಈ ವಿಷಯ ಪ್ರಕಟಿಸಲಾಗಿದೆ.

’34 ವರ್ಷಗಳಲ್ಲಿನ ಸುಮಾರು 4 ಲಕ್ಷ ಉಪಗ್ರಹ ಚಿತ್ರಗಳ ವಿಶ್ಲೇಷಣೆ ನಡೆಸಲಾಯಿತು. ಪ್ರತಿ ತಿಂಗಳು ಆವೃತಗೊಳ್ಳುವ ಮಂಜುಗಡ್ಡೆ ಕಡಿಮೆಯಾಗಿರುವುದು ಕಂಡು ಬಂತು. ಇದರಿಂದ, ಈ ನದಿಗಳ ದಂಡೆಯುದ್ದಕ್ಕೂ ವಾಸಿಸುವ ಜನರು ಆರ್ಥಿಕತೆ ಸವಾಲು ಎದುರಿಸಬೇಕಾಯಿತು. ಜತೆಗೆ, ಕೈಗಾರಿಕೆಗಳ ಅಭಿವೃದ್ಧಿಗೂ ಅಡ್ಡಿಯಾಯಿತು‘ ಎಂದು ನಾರ್ಥ್ ಕ್ಯಾರೊಲಿನಾ ವಿಶ್ವವಿದ್ಯಾಲಯದ ಸಂಶೋಧಕ ಕ್ಸಿಯಾವೊ ಯಾಂಗ್ ತಿಳಿಸಿದ್ದಾರೆ.

’2008 ಮತ್ತು 2018 ಹಾಗೂ 1984 ಮತ್ತು 1994ರ ಅವಧಿಗಳಲ್ಲಿ ಪ್ರತಿ ತಿಂಗಳು ಮಂಜುಗಡ್ಡೆ ಶೇಕಡ 0.3ರಿಂದ ಶೇಕಡ 4.3ರಷ್ಟು ಕಡಿಮೆಯಾಗಿದೆ. ಪೂರ್ವ ಯುರೋಪ್, ಅಲಸ್ಕಾ ಪ್ರದೇಶಗಳಲ್ಲಿ ಇದು ಹೆಚ್ಚು ಪರಿಣಾಮ ಬೀರಿದೆ‘ ಎಂದಿದ್ದಾರೆ.

ಯಾಂಗ್ ಅವರ ತಂಡವು ಭವಿಷ್ಯದ ಬಗ್ಗೆಯೂ ವಿಶ್ಲೇಷಣೆ ನಡೆಸಿದೆ. 2009–2029 ಹಾಗೂ 2080–2100ನೇ ಇಸ್ವಿಯಲ್ಲಿ ಜಾಗತಿಕ ತಾಪಮಾನ ಯಾವ ರೀತಿ ಪರಿಸರದ ಮೇಲೆ ಪರಿಣಾಮ ಬೀರಬಹುದು ಎನ್ನುವ ಅಧ್ಯಯನ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.