ವಾಷಿಂಗ್ಟನ್: ಅಮ್ನೆಸ್ಟಿ ಇಂಟರ್‌ನ್ಯಾಷನಲ್ ನೀಡುವ ‘ಆತ್ಮಸಾಕ್ಷಿಯ ರಾಯಭಾರಿಗಳು’ಪ್ರಶಸ್ತಿ ಈ ಬಾರಿ ಸ್ವೀಡಿಷ್ ಪರಿಸರ ಹೋರಾಟಗಾರ್ತಿ ‘ಡೇಸ್ ಫಾರ್ ಫ್ಯೂಚರ್’ ಯುವ ಚಳವಳಿಯಗ್ರೆಟ್ಟಾ ಥುನ್‌ಬರ್ಗ್‌ಗೆ ಲಭಿಸಿದೆ.

ಹವಾಮಾನ ದುರಂತವನ್ನುತಪ್ಪಿಸುವ ನಿಟ್ಟಿನಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯಗಳನ್ನು ಪ್ರಚುರಪಡಿಸಿದ ಆಕೆಯ ಕೆಲಸಗಳನ್ನು ಗುರುತಿಸಿಈ ಪ್ರಶಸ್ತಿ ನೀಡಲಾಗಿದೆ.

ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಗ್ರೆಟ್ಟಾ ಬಂದಾಗ ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಕೆ, ‘ಹವಾಮಾನ ವೈಪರೀತ್ಯವನ್ನು ತಡೆಯಲು ಅಗತ್ಯ ರಾಜಕಾರಣ ಈಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪ್ರಯತ್ನಪಟ್ಟು ಅಧಿಕಾರದಲ್ಲಿ ಇರುವವರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ಕಾರ್ಯೋನ್ಮುಖರನ್ನಾಗಿ ಮಾಡಬೇಕಾಗಿದೆ’ಎಂದು 16 ವರ್ಷದ ಗ್ರೆಟ್ಟಾ ಹೇಳಿದಳು.

ಪ್ರೌಢಶಾಲೆ ಶಿಕ್ಷಣ ಪಡೆಯುತ್ತಿರುವ ಈಕೆ 2018ರಲ್ಲಿ ಪ್ರತಿ ಶುಕ್ರವಾರ ಸ್ವೀಡನ್‌ನ ಸಂಸತ್ತಿನ ಎದುರು ಕುಳಿತು ಸಾವಿರಾರು ಮಂದಿ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿದ್ದಳು. ಈ ಪ್ರಶಸ್ತಿಯು ತನ್ನೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಸಲ್ಲುತ್ತದೆ‘ ಎಂದು ಆಕೆ ಹೇಳಿದಳು.

‘ಜಾಗತಿಕ ಹವಾಮಾನ ಮುಷ್ಕರ’ಎಂಬ ಹೆಸರಿನಲ್ಲಿ ಇದೇ 20ರಂದು ಗ್ರೆಟ್ಟಾ ಮತ್ತು ನ್ಯೂಯಾರ್ಕ್‌ನ ಸಾವಿರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.