ಲಂಡನ್(ಪಿಟಿಐ): ರಾಜಮನೆತನದ ಹೊಣೆಗಾರಿಕೆಗಳಿಂದ ಮಾರ್ಚ್ 31ರಂದು ಔಪಚಾರಿಕವಾಗಿ ಹಿಂದೆ ಸರಿಯುವುದಾಗಿ ಬ್ರಿಟನ್ ರಾಜಕುಮಾರ ಹ್ಯಾರಿ ಅವರ ಪತ್ನಿ ಮೇಘನ್ ಮರ್ಕೆಲ್ ಘೋಷಿಸಿದ್ದಾರೆ.

ಹ್ಯಾರಿ ಮತ್ತು ಮೇಘನ್ ಅವರು ಏಪ್ರಿಲ್ 1ರಿಂದ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಕಚೇರಿ ಹೊಂದಿರುವುದಿಲ್ಲ. ದಂಪತಿ ಕೆನಡಾದಲ್ಲಿ ನೆಲೆಸುವ ಸಾಧ್ಯತೆ ಇದೆ ಮತ್ತು ಕೆಲಕಾಲ ಬ್ರಿಟನ್‌ನಲ್ಲೂ ಕಾಲ ಕಳೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಅಟಾರ್ನಿ ಜನರಲ್ ರಾಜೀನಾಮೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್ ಗುರುವಾರ ರಾಜೀನಾಮೆ ನೀಡಿದ್ದಾರೆ.

ನ್ಯಾಯಮೂರ್ತಿ ಖಾಜಿ ಪೈಜ್ ಎಸ್ಸಾ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಕುರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದ ಕೆಲವು ಸದಸ್ಯರನ್ನು ಅನ್ವರ್ ಟೀಕಿಸಿದ್ದರು.

ಅನ್ವರ್ ಅವರು ರಾಜೀನಾಮೆ ನೀಡುವಂತೆ ವಕೀಲರು ಆಗ್ರಹಿಸಿದ್ದರು. ಈ ಹೇಳಿಕೆಯಿಂದ ಸರ್ಕಾರ ಅಂತರ ಕಾಯ್ದುಕೊಂಡಿದೆ.

ಪತ್ರಕರ್ತರನ್ನು ದೇಶದಿಂದ ಹೊರ ಹಾಕಿದ ಚೀನಾ

ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯ ಮೂವರು ವರದಿಗಾರರನ್ನು ದೇಶದಿಂದ ಹೊರಗೆ ಕಳುಹಿಸಿರುವ ಚೀನಾದ ನಡೆಗೆ ಐರೋಪ್ಯ ಒಕ್ಕೂಟ ಗುರುವಾರ ಕಳವಳ ವ್ಯಕ್ತಪಡಿಸಿದೆ.

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದೂ ಬಣ್ಣಿಸಿದೆ.ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಂಕಣದಲ್ಲಿ ಚೀನಾವನ್ನು ಟೀಕಿಸಲಾಗಿತ್ತು. ಅದಕ್ಕಾಗಿ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಇದಕ್ಕೆ ಕ್ಷಮೆ ಕೋರಲು ಪತ್ರಿಕೆಯು ನಿರಾಕರಿಸಿದ ಕಾರಣ ವರದಿಗಾರರನ್ನು ದೇಶದಿಂದ ಹೊರಗೆ ಕಳುಹಿಸಲಾಗಿದೆ ಎಂದು ಚೀನಾ ಹೇಳಿತ್ತು.

ಹವ್ಯಾಸಿ ಪತ್ರಕರ್ತ ಅಹ್ಮರ್ ಖಾನ್‌ಗೆ ‘ಕೇಟ್ ವೆಬ್’ ಪ್ರಶಸ್ತಿ

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಕಾಶ್ಮೀರ ಪರಿಸ್ಥಿತಿ ಕುರಿತು ವರದಿಗಳನ್ನು ನೀಡಿದ್ದ ಹವ್ಯಾಸಿ ಪತ್ರಕರ್ತ ಅಹ್ಮರ್ ಖಾನ್ ಅವರಿಗೆ ಎಎಫ್‌ಪಿ ಸುದ್ದಿ ಸಂಸ್ಥೆಯು ‘ಕೇಟ್ ವೆಬ್’ ಪ್ರಶಸ್ತಿಯನ್ನು ಗುರುವಾರ ಘೋಷಿಸಿದೆ.

ಪ್ರತಿಕೂಲ ಸನ್ನಿವೇಶ ಮತ್ತು ಸವಾಲಿನಿಂದ ಕೂಡಿರುವ ಪ್ರದೇಶಗಳ ವರದಿಗಾರಿಕೆಗಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗತ್ತದೆ. ಅಹ್ಮರ್ ಖಾನ್ ಅವರು ಸರಣಿ ವಿಡಿಯೊ ಮತ್ತು ವರದಿಗಳನ್ನು 2019ರ ಆಗಸ್ಟ್‌ನಲ್ಲಿ ನೀಡಿದ್ದರು.

ಈ ವರದಿಗಳಿಗೆ ಏಷ್ಯಾ ವಿಭಾಗದ ಪ್ರಶಸ್ತಿಯನ್ನು ಅಹ್ಮರ್ ಖಾನ್ ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿ ಮೊತ್ತ ₹ 2.33 ಲಕ್ಷ ಆಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.