ವಾಷಿಂಗ್ಟನ್: ಅಮೆರಿಕ ಚುನಾವಣೆಯ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದವನ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.

ಪೆನ್ಸುಲ್ವೆನಿಯಾದ ಬೇಥಲ್ ಪಾರ್ಕ್ ನಿವಾಸಿ 20 ವರ್ಷದ ಯುವಕ ಥಾಮಸ್ ಮ್ಯಾಥೂಸ್ ಕ್ರೂಕ್ ಗುಂಡಿನ ದಾಳಿ ನಡೆಸಿದ ವ್ಯಕ್ತಿ. ಆತನನ್ನು ಸಿಕ್ರೇಟ್ ಸರ್ವಿಸ್ ಪೊಲೀಸ್ ಹತ್ಯೆ ಮಾಡಿದ್ದಾರೆ ಎಂದು ಎಫ್ಬಿಐ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಎಫ್ಬಿಐ ಸಾರ್ವಜನಿಕವಾಗಿ ಹೇಳಿಕೆ ಬಿಡುಗಡೆ ಮಾಡಿಲ್ಲ.

ದಾಳಿಯಲ್ಲಿ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಟ್ರಂಪ್ ಪಾರಾದರೆ, ಸಮಾವೇಶದಲ್ಲಿ ಭಾಗಿಯಾಗಿದ್ದ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ. ಅಲ್ಲದೇ ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಫ್ಬಿಐ ಹೇಳಿದೆ. ಟ್ರಂಪ್ ಅವರ ಬಲ ಕಿವಿಯ ಅಂಚಿಗೆ ಗುಂಡು ತಗುಲಿದ್ದು ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಂತಕನ ಉದ್ದೇಶ ಏನಾಗಿತ್ತು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಎಫ್ಬಿಐ ಹೇಳಿದೆ. ಕ್ರೂಕ್ 2022ರಲ್ಲಿ ಡಿಪ್ಲೊಮಾ ಮುಗಿಸಿದ್ದು ಆತ ಪ್ರಮಾಣಪತ್ರ ಸ್ವೀಕರಿಸುವ ಹಾಗೂ ಆತನ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪೆನ್ಸುಲ್ವೆನಿಯಾದಲ್ಲಿ ಟ್ರಂಪ್ ಅವರು ಚುನಾವಣಾ ಸಮಾವೇಶದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುವಾಗ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದ.

ಭದ್ರತೆಯ ನಡುವೆಯೂ ಟ್ರಂಪ್ ಅವರ ವಿರುದ್ಧ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತರಾಗಿರುವ ಅಮೆರಿಕದ ಸೀಕ್ರೆಟ್ ಸರ್ವಿಸ್ನ ಸ್ನೈಪರ್ ಪಡೆ ಕ್ಷಣಾರ್ಧದಲ್ಲಿ ಪ್ರತಿದಾಳಿ ನಡೆಸಿದ್ದರು.
.ಟ್ರಂಪ್ ಮೇಲೆ ಗುಂಡಿನ ದಾಳಿ; ದೇಶದ ಜನರು ಒಗ್ಗಟ್ಟಿನಿಂದ ಖಂಡಿಸುತ್ತೇವೆ: ಬೈಡನ್.ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಹಿಂಸೆಗೆ ಅವಕಾಶವಿಲ್ಲ ಎಂದ ಹ್ಯಾರಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.