ಒಟ್ಟಾವ: ಖಾಲಿಸ್ತಾನಿ ಪರ ಹೋರಾಟಗಾರರು ಹಾಗೂ ಭಾರತೀಯರ ಮಧ್ಯೆ ಬ್ರಾಂಪ್ಟನ್ನ ಹಿಂದೂ ಸಭಾ ದೇವಾಲಯದ ಎದುರು ನ.3ರಂದು ನಡೆದ ಘರ್ಷಣೆ ಸಂಬಂಧ ದೇವಾಲಯದ ಆಡಳಿತ ಮಂಡಳಿಯು ಅರ್ಚಕನನ್ನು ಅಮಾನತು ಮಾಡಿದೆ. ಹಿಂಸೆಗೆ ಪ್ರಚೋದನೆ ನೀಡಿದಕ್ಕಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಇದೇ ವೇಳೆ ‘ಆಂಟೇರಿಯೊ ಸಿಖ್ ಆ್ಯಂಡ್ ಗುರುದ್ವಾರ ಕೌನ್ಸಿಲ್’ ಸಂಸ್ಥೆಯು ಘಟನೆಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ‘ನಮ್ಮ ಧರ್ಮದಲ್ಲಿ ಹಿಂಸೆ ಹಾಗೂ ಸಂಘರ್ಷಕ್ಕೆ ಜಾಗವಿಲ್ಲ. ದೇವಾಲಯಗಳು ಅಧ್ಯಾತ್ಮಕ್ಕೆ, ಸಮುದಾಯದ ಒಗ್ಗಟ್ಟಿಗೆ, ಹಿಂಸೆಯಿಂದ ದೂರವಿರುವ ಸ್ಥಳವಾಗಬೇಕು. ಶಾಂತಿ ನೆಲೆಸಲು ಎಲ್ಲ ಧರ್ಮಗಳ ಅನುಯಾಯಿಗಳು ಸಂಯಮದಿಂದ ಇರಬೇಕು, ಪರಸ್ಪರ ಮಾತುಕತೆ ನಡೆಸಬೇಕು’ ಎಂದು ಸಂಸ್ಥೆ ಆಗ್ರಹಿಸಿದೆ.

‘ಅನುಮತಿ ಇಲ್ಲದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ದೇವಾಲಯದ ಅರ್ಚಕ ರಾಜಿಂದರ್ ಪ್ರಸಾದ್ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಅಮಾನತು ಮಾಡಲಾಗಿದೆ’ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮಧುಸೂಧನ್ ಲಾಮಾ ಅವರು ಹೇಳಿದರು.

ಗುರುದ್ವಾರ ಸಂಸ್ಥೆಯ ಹೇಳಿಕೆಯ ಪ್ರತಿಯನ್ನು ಹಾಗೂ ಅಮಾನತು ಪ್ರತಿಯನ್ನು ಬ್ರಾಂಪ್ಟನ್ನ ಮೇಯರ್ ಪೆಟ್ರಿಕ್ ಬ್ರೌನ್ ಅವರು ಬುಧವಾರ ತಮ್ಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.