ಲಂಡನ್: ಕೇಂಬ್ರಿಜ್ ವಿಶ್ವವಿದ್ಯಾಲಯದ ಉಪನ್ಯಾಸದ ವೇಳೆಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಗಾಸಸ್ ಬೇಹುಗಾರಿಕಾ ಕುತಂತ್ರಾಂಶದ ವಿವಾದವನ್ನು ಪ್ರಸ್ತಾಪಿಸಿದ್ದಾರೆ.

ತಾವೂ ಸೇರಿದಂತೆ ಭಾರತದ ಹಲವು ರಾಜಕಾರಣಿಗಳ ಮೊಬೈಲ್‌ಗಳಲ್ಲಿ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲಾಗಿತ್ತು ಎಂದು ಹೇಳಿದ್ದಾರೆ.

‘ಗುಪ್ತಚರ ಅಧಿಕಾರಿಗಳು ನನ್ನನ್ನು ಕರೆದು, ನೀವು ಪೋನ್‌ನಲ್ಲಿ ಮಾತನಾಡುವಾಗ ದಯವಿಟ್ಟು ಜಾಗರೂಕರಾಗಿರಿ. ನಿಮ್ಮ ಕರೆಗಳನ್ನು ನಾವು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದ್ದರು ಎಂದು ಗಾಂಧಿ ಹೇಳಿದ್ದಾರೆ.

ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘ಪ್ರತಿಪಕ್ಷಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳ ಅಡಿಯಲ್ಲಿ ಬಾರದ ವಿಷಯಗಳಲ್ಲಿಯೂ ನನ್ನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ’ಎಂದು ಹೇಳಿದರು.

‘ಮಾಧ್ಯಮಗಳು ಮತ್ತು ಪ್ರಜಾಪ್ರಭುತ್ವದ ಮೇಲೆ ಈ ರೀತಿಯ ಆಕ್ರಮಣ ನಡೆಯುತ್ತಿರುವಾಗ ಪ್ರತಿಪಕ್ಷಗಳು ಜನರೊಂದಿಗೆ ಸಂವಹನ ನಡೆಸುವುದು ತುಂಬಾ ಕಷ್ಟ’ಎಂದು ಗಾಂಧಿ ಹೇಳಿದರು.

ರಾಜಕಾರಣಿಗಳು ಮತ್ತು ಇತರರ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರ ಪೆಗಾಸಸ್ ಕುತಂತ್ರಾಂಶ ಬಳಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿತ್ತು. ಆದರೆ, 29 ಮೊಬೈಲ್ ಫೋನ್‌ಗಳಲ್ಲಿ ಪೆಗಾಸಸ್ ಪತ್ತೆಯಾಗಿಲ್ಲ. ಐದು ಫೋನ್‌ಗಳಲ್ಲಿ ಮಾತ್ರ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಇಸ್ರೇಲ್‌ನ ಎನ್‌ಎಸ್ಒ ಸಮೂಹವು ಪೆಗಾಸಸ್ ಬೇಹುಗಾರಿಕೆಯ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಿತ್ತು.

ಜಾಗತಿಕವಾಗಿ ಮಾನವ ಹಕ್ಕು ಹೋರಾಟಗಾರರು, ರಾಜಕಾರಣಿಗಳು, ಪತ್ರಕರ್ತರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ವಿರುದ್ಧ ಸರ್ಕಾರಗಳು ಪೆಗಾಸಸ್ ಅಪ್ಲಿಕೇಶನ್ ಬಳಸಿ ಗೂಢಚಾರಿಕೆ ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.