ಸ್ಯಾನ್ ಫ್ರಾನ್ಸಿಸ್ಕೊ: ಅಮೆಜಾನ್ ಮತ್ತು ಗೂಗಲ್ ಸಂಸ್ಥೆಯಲ್ಲಿರುವಂತೆಕೂಲ್ ಮತ್ತು ಟ್ರೆಂಡಿ ಲುಕ್ಗಾಗಿ ಕಳೆದ ಕೆಲವು ವರ್ಷಗಳಿಂದ ಐಬಿಎಂ1 ಲಕ್ಷ ನೌಕರರನ್ನು ಕೈಬಿಟ್ಟಿದೆ ಎಂದು ಐಬಿಎಂನ ಮಾಜಿ ನೌಕರರೊಬ್ಬರು ಮೊಕದ್ದಮೆ ದಾಖಲಿಸಿದ್ದಾರೆ.

ದಿ ರೆಜಿಸ್ಟಾರರ್ ಪ್ರಕಾರ ಐಬಿಎಂನ ಮಾಜಿ ಸೇಲ್ಸ್ಮೆಮ್ ಜೊನಾಥಮ್ ಲಾಂಗ್ಲೇ ಎಂಬವರ ಪರವಾಗಿ ವಕೀಲರೊಬ್ಬರು ಈ ಮೊಕದ್ದಮೆ ದಾಖಲಿಸಿದ್ದಾರೆ.ಕಳೆದ 5 ವರ್ಷಗಳಲ್ಲಿ 50,000- 1ಲಕ್ಷ ನೌಕರರನ್ನು ಐಬಿಎಂ ಕೈ ಬಿಟ್ಟಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಯುವ ಜನರಿಗೆ ಮಾತ್ರ ಮಣೆ ಹಾಕಿ ಟ್ರೆಂಡಿಯಾಗಿ ಕಾಣಿಸಿಕೊಳ್ಳಲು ಹಲವಾರು ಹಿರಿಯ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ಯುವಕರಿಗೆ ಆದ್ಯತೆ ನೀಡುವುದಕ್ಕಾಗಿ ಹಿರಿಯರನ್ನು ಕೆಲಸದಿಂದ ತೆಗೆದು ಹಾಕುವ ಅನ್ಯಾಯದ ಕ್ರಮಕ್ಕಾಗಿ ಲಾಂಗ್ಲೇ(61) ಅವರು ಕಳೆದ ವರ್ಷ ಐಬಿಎಂ ವಿರುದ್ಧ ದೂರು ಸಲ್ಲಿಸಿದ್ದರು.

ಆದಾಗ್ಯೂ, 108 ವರ್ಷ ಹಳೆ ಕಂಪನಿ ಐಬಿಎಂ ತಾವು ಎಂದಿಗೂ ವಯಸ್ಸಿನಲ್ಲಿ ತಾರತಮ್ಯ ಮಾಡಿಲ್ಲ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿದ ಐಬಿಎಂ, ಕಂಪನಿ ಪ್ರತಿವರ್ಷ 50,000 ಜನರನ್ನು ಕೆಲಸಕ್ಕೆ ನೇಮಕ ಮಾಡುತ್ತದೆ.ನಮ್ಮ ತಂಡದ ತರಬೇತಿಗಾಗಿ ಅರ್ಧ ಬಿಲಿಯನ್ ಡಾಲರ್ನಷ್ಟು ಹಣ ವ್ಯಯಿಸುತ್ತೇವೆ. ಪ್ರತಿ ದಿನ ನಮಗೆ 8,000 ಉದ್ಯೋಗ ಅವಕಾಶ ಬೇಡಿಕೆಯ ಅರ್ಜಿಗಳು ಬರುತ್ತವೆ. ಇದು ನಮ್ಮ ಅನುಭವಕ್ಕೆ ಬಂದ ಅತೀ ಹೆಚ್ಚು ಅರ್ಜಿಗಳಾಗಿವೆ.ಇದೇ ಐಬಿಎಂನ ಕಾರ್ಯತಂತ್ರ ಮತ್ತು ಭವಿಷ್ಯಕ್ಕೆ ಪ್ರಚೋದನೆ ಎಂದಿದೆ.

ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ತಮ್ಮ ಕಂಪನಿಯಿಂದ ಮೂರನೇ ಒಂದರಷ್ಟು ನೌಕರರನ್ನು ಕೈಬಿಡುವ ಐಬಿಎಂಅಷ್ಟೇ ಜನರಿಗೆ ಉದ್ಯೋಗವನ್ನೂ ಕೊಡುತ್ತಿದೆ.

ಲಾಂಗ್ಲೇಅವರು ಐಬಿಎಂ ಹೈಬ್ರಿಡ್ ಕ್ಲೌಡ್ ಸೇಲ್ಸ್ ಪರ್ಸನ್ ಆಗಿ ಉತ್ತಮ ಕೆಲಸ ಮಾಡಿದ್ದರೂ ಅವರನ್ನು ಕೈ ಬಿಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಆದಾಗ್ಯೂ, ಐಬಿಎಂ ಸಂಸ್ಥೆಯನ್ನು ಟ್ರೆಂಡಿಯನ್ನಾಗಿ ಮಾಡಲು ಸಮರ್ಥ ನೌಕರರನ್ನು ಆಯ್ಕೆ ಮಾಡುತ್ತಿದೆ ಎಂದು ಪ್ರಸ್ತುತ ಸಂಸ್ಥೆಯ ಎಚ್ಆರ್ ಉಪಾಧ್ಯಕ್ಷ ಆಲನ್ ವೈಲ್ಡ್ ಹೇಳಿದ್ದಾರೆ

ಕಳೆದ ಮಾರ್ಚ್ ತಿಂಗಳಲ್ಲಿ ಪ್ರೊಪಬ್ಲಿಕ ತನಿಖಾ ವರದಿಯೊಂದನ್ನು ಪ್ರಕಟಿಸಿದ್ದು ಐಬಿಎಂ ಸಂಸ್ಥೆ ಕಳೆದ ಐದು ವರ್ಷಗಳಲ್ಲಿ 40 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾಗಿರುವ 20,000 ಅಮೆರಿಕನ್ ನೌಕರರನ್ನು ಕೈಬಿಟ್ಟಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.