ವಾಷಿಂಗ್ಟನ್: ನಕಲಿ ವಿಶ್ವವಿದ್ಯಾಲಯದಲ್ಲಿ ನೋಂದಾಯಿಸಿಕೊಂಡಿದ್ದ 130 ವಿದೇಶಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಬಹುತೇಕರು ಭಾರತೀಯರು.

ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸಲು ನೆರವು ನೀಡಿದ ಜಾಲದ ಎಂಟು ಮಂದಿಯನ್ನು ಗುರುವಾರ ಬಂಧಿಸಲಾಗಿತ್ತು. ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ನಾಗರಿಕ ವಲಸೆ ಪ್ರಕರಣ ದಾಖಲಿಸಲಾಗಿದೆ.

ಫಾರ್ಮಿಂಗ್ಟನ್ ಹಿಲ್ಸ್ ನಕಲಿ ವಿಶ್ವವಿದ್ಯಾಲಯದಲ್ಲಿ ವಿದೇಶಿಯರ ಹೆಸರನ್ನು ನೋಂದಾಯಿಸುವ ಮೂಲಕ ಅಮೆರಿಕದಲ್ಲಿ ವಾಸಿಸುವ ಅವಕಾಶವನ್ನು ಈ ಜಾಲ ಕಲ್ಪಿಸುತ್ತಿತ್ತು.ವಲಸೆ ಮತ್ತು ಸುಂಕ ಜಾರಿ ಇಲಾಖೆಯ ಅಧಿಕಾರಿಗಳು ಈ ಜಾಲವನ್ನು ಪತ್ತೆ ಮಾಡಿದ್ದಾರೆ.

‘ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಆರೋಪಿ ಪರ ವಕೀಲರು,ವಿಶ್ವವಿದ್ಯಾಲಯದ ಕಾನೂನುಬಾಹಿರ ಚಟುವಟಿಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಇರಲಿಲ್ಲ.ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಉದ್ದೇಶದಿಂದ ಈ ಪ್ರಕರಣದಲ್ಲಿ ಅವರನ್ನು ಸಿಲುಕಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ವಿಶ್ವವಿದ್ಯಾಲಯ ಕಾನೂನುಬದ್ಧವಾಗಿರಲಿಲ್ಲ ಎಂಬುದು ವಿದ್ಯಾರ್ಥಿಗಳಿಗೆ ತಿಳಿದಿತ್ತು. ಹೀಗಿದ್ದೂ ಅಮೆರಿಕದಲ್ಲಿ ನೆಲೆಸುವ ಉದ್ದೇಶದಿಂದ ನಕಲಿ ವೀಸಾ ಪಡೆದಿದ್ದಾರೆ’ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

ನ್ಯೂಜೆರ್ಸಿ, ಅಟ್ಲಾಂಟ, ಹ್ಯೂಸ್ಟನ್, ಮಿಚಿಗನ್, ಕ್ಯಾಲಿಫೋರ್ನಿಯಾ, ಲೂಸಿಯಾನ, ದಕ್ಷಿಣ ಕೆರೊಲಿನಾ, ಸೇಂಟ್ ಲೂಯಿಸ್ ಸೇರಿದಂತೆ ಅಮೆರಿಕದಾದ್ಯಂತ ಹಲವರನ್ನು ಬಂಧಿಸಲಾಗಿದೆ.

ನಮ್ಮರಾಯಭಾರಿ ಕಚೇರಿಯಿಂದ ಘಟನೆಯ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಸಹಕಾರ ನೀಡಲು ಅಮೆರಿಕದಲ್ಲಿರುವ ಭಾರತೀಯ ಸಂಘಟನೆಗಳನ್ನು ಸಂಪರ್ಕಿಸಿದ್ದೇವೆ.
-ರಾಜೀವ್ ಕುಮಾರ್, ವಿದೇಶಾಂಗ ಇಲಾಖೆ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.