ವಿಶ್ವಸಂಸ್ಥೆ: ಆಫ್ರಿಕನ್ ಒಕ್ಕೂಟಕ್ಕೆ ಜಿ–20 ಗುಂಪಿನ ಕಾಯಂ ಸದಸ್ಯತ್ವ ನೀಡಲು ಭಾರತದ ಕ್ರಮವು ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭದ್ರತಾ ಮಂಡಳಿಯನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಲು ಈ ನಡೆಯು ವಿಶ್ವಸಂಸ್ಥೆಗೆ ಪ್ರೇರಣೆಯಾಗಬೇಕು ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದರು.

ಭದ್ರತಾ ಮಂಡಳಿಯ ಸುಧಾರಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಭಾರತವು ಜಿ–20 ಅಧ್ಯಕ್ಷತೆ ವಹಿಸಿದ್ದ ಸಂದರ್ಭದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಆಫ್ರಿಕನ್ ಒಕ್ಕೂಟವನ್ನು ಜಿ–20 ಗುಂಪಿಗೆ ಸೇರ್ಪಡೆ ಮಾಡಲಾಯಿತು ಎಂದರು.

ಆಫ್ರಿಕಾ ಪಾಲ್ಗೊಳ್ಳುವಿಕೆ ಮೂಲಕ ಒಕ್ಕೂಟವು ಹೆಚ್ಚು ಪ್ರಾತಿನಿಧಿತ್ವ ಪಡೆಯುತ್ತದೆ, ಪರಿಪೂರ್ಣವಾಗುತ್ತದೆ ಎಂಬುದನ್ನು ಭಾರತ ದೃಢವಾಗಿ ನಿರ್ಧರಿಸಿತ್ತು ಎಂದು ಹೇಳಿದರು.

ಭದ್ರತಾ ಮಂಡಳಿಯ ಸುಧಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿರುವ ದಕ್ಷಿಣದ ರಾಷ್ಟ್ರಗಳ ಕೂಗನ್ನು ತಲುಪಿಸಲು ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರವಾದ ಭಾರತವು ಇನ್ನಷ್ಟು ಶ್ರಮಿಸುತ್ತದೆ ಎಂದು ತಿಳಿಸಿದರು.

‘ವಿಶ್ವಸಂಸ್ಥೆಯ ಹಲವು ಸದಸ್ಯ ರಾಷ್ಟ್ರಗಳು ‘ಶಾಶ್ವತ’ ಮತ್ತು ‘ಶಾಶ್ವತವಲ್ಲದ’ ಎರಡೂ ವರ್ಗದ ಸದಸ್ಯತ್ವವನ್ನು ವಿಸ್ತರಿಸಲು ಬೆಂಬಲ ನೀಡುತ್ತವೆ. ಕೇವಲ ಶಾಶ್ವತವಲ್ಲದ ವರ್ಗದ ಸದಸ್ಯತ್ವದ ವಿಸ್ತರಣೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ ಶಾಶ್ವತ ಮತ್ತು ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳ ನಡುವಣ ಅಂತರವನ್ನು ಈ ಕ್ರಮವು ಹೆಚ್ಚಿಸುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.