ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯಾದ ಭವಿಷ್ಯಕ್ಕೆ ಭಾರತ-ಚೀನಾ ಬಾಂಧವ್ಯ ಅತಿ ಮುಖ್ಯ: ಜೈಶಂಕರ್

Published : 25 ಸೆಪ್ಟೆಂಬರ್ 2024, 5:04 IST
Last Updated : 25 ಸೆಪ್ಟೆಂಬರ್ 2024, 5:04 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ಏಷ್ಯಾದ ಭವಿಷ್ಯದ ದೃಷ್ಟಿಕೋನದಲ್ಲಿ ಭಾರತ-ಚೀನಾ ನಡುವಣ ಬಾಂಧವ್ಯವು ಅತಿ ಮುಖ್ಯವೆನಿಸಿದೆ. ಅಲ್ಲದೆ ಅದು ಏಷ್ಯಾದ ಭವಿಷ್ಯದ ಮೇಲೆ ಮಾತ್ರವಲ್ಲದೆ ಇಡೀ ಜಗತ್ತಿನ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಉಭಯ ದೇಶಗಳ ನಡುವಣ ಬಿಕ್ಕಟ್ಟು ಇಂದಿನ ಜಾಗತಿಕ ರಾಜಕೀಯದಲ್ಲಿ 'ತುಂಬಾ ವಿರಳವಾದ ಸಮಸ್ಯೆ' ಎಂದೆನಿಸಿದೆ ಎಂದು ಅವರು ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್ ಆಯೋಜಿಸಿದ್ದ 'ಭಾರತ, ಏಷ್ಯಾ ಮತ್ತು ವಿಶ್ವ' ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಕಾಲೀನ ಪರಿಸ್ಥಿತಿಯಲ್ಲಿ ಉಭಯ ದೇಶಗಳ ನಡುವಣ ಸಂಬಂಧವು ಗಂಭೀರ ಸ್ವರೂಪದಲ್ಲಿ ಕದಡಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

1962ರ ಯುದ್ಧ ಸೇರಿದಂತೆ ಚೀನಾದೊಂದಿಗೆ ಭಾರತ ಅತ್ಯಂತ ಕಠಿಣ ಇತಿಹಾಸವನ್ನು ಹೊಂದಿದೆ ಎಂದು ಜೈಶಂಕರ್ ಉಲ್ಲೇಖಿಸಿದ್ದಾರೆ.

'ನೆರೆಹೊರೆಯ ಎರಡು ದೇಶಗಳಾದ ಭಾರತ ಹಾಗೂ ಚೀನಾದಲ್ಲಿ ತಲಾ ನೂರು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ವಿಶಿಷ್ಟವೆನಿಸಿದೆ. ಜಾಗತಿಕ ಮಟ್ಟದಲ್ಲಿ ಎರಡೂ ದೇಶಗಳು ಪ್ರಗತಿ ಸಾಧಿಸುತ್ತಿವೆ. ಸಾಮಾನ್ಯ ಗಡಿಯನ್ನು ಹಂಚಿಕೊಳ್ಳುವ ಹಿನ್ನೆಲೆಯಲ್ಲಿ ಬಹಳ ಸಂಕೀರ್ಣವಾದ ಸಮಸ್ಯೆಯನ್ನು ಹೊಂದಿದೆ. ಇಂದಿನ ಜಾಗತಿಕ ರಾಜಕೀಯದಲ್ಲಿ ತುಂಬಾ ವಿರಳವಾದ ಸಮಸ್ಯೆಯನ್ನು ಹೊಂದಿದೆ' ಎಂದು ತಿಳಿಸಿದ್ದಾರೆ.

'ಶೇ 75ರಷ್ಟು ಸಮಸ್ಯೆ ಬಗೆಹರಿಸಲಾಗಿದೆ ಎಂಬ ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಜೈಶಂಕರ್, ಸೇನೆ ಹಿಂದಕ್ಕೆ ಸರಿದಿದೆ. ಅದು ಕೂಡ ಸಮಸ್ಯೆಯ ಒಂದು ಭಾಗವಾಗಿತ್ತು. ವಾಸ್ತವ ಗಡಿ ರೇಖೆಯಲ್ಲಿ ಗಸ್ತು ತಿರುಗುವುದು ಸದ್ಯದ ಪ್ರಮುಖ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸಬೇಕಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT