ಇಸ್ಲಾಮಾಬಾದ್: 4 ವರ್ಷಗಳ ಹಿಂದೆ ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ನ ಅಧಿಕಾರಿಗಳು ಭಾರಿ ಭದ್ರತೆ ನಡುವೆ ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಭೇಟಿಯಾದರು ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬಂಡಿಹುರಹ್ ಪಟ್ಟಣದ 29 ವರ್ಷದ ಫಿರೋಜ್ ಅಹಮ್ಮದ್ ಲೋನ್ ಮತ್ತು 24 ವರ್ಷದ ನೂರ್ ಮುಹಮ್ಮದ್ ವಾನಿ ಅವರನ್ನು ಪಾಕ್ ಅಧಿಕಾರಿಗಳು ಬಂಧಿಸಿದ್ದಾರೆ.

2020ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್–ಬಾಲ್ಟಿಸ್ತಾನ್ನಲ್ಲಿ ಇವರ ಬಂಧನವಾಗಿತ್ತು.

‘ಗಿಲ್ಗಿಟ್–ಬಾಲ್ಟಿಸ್ತಾನ್ ಜೈಲಿನಿಂದ ಅವರನ್ನು ಇತ್ತೀಚೆಗೆ ರಾವಲ್ಪಿಂಡಿ ಜೈಲಿಗೆ ಸ್ಥಳಾಂತರಿಸಲಾಗಿತ್ತು’ಎಂದು ವರದಿ ತಿಳಿಸಿದೆ.

ಭಾರತ ಸರ್ಕಾರದ ಮನವಿ ಮೇರೆಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

‘ಭಾರತೀಯ ಹೈಕಮಿಷನ್ನ ಮೂವರು ಅಧಿಕಾರಿಗಳ ನಿಯೋಗವು ಅದಿಯಾಲ ಜೈಲಿನ ಇಬ್ಬರು ಕೈದಿಗಳನ್ನು ಭೇಟಿಯಾದರು. ಅವರ ಜೊತೆ ಆಂತರಿಕ ಸಚಿವಾಲಯದ ಅಧಿಕಾರಿಗಳೂ ಇದ್ದರು’ ಎಂದು ರಾಜತಾಂತ್ರಿಕ ಮೂಲಗಳನ್ನು ಉದ್ದೇಶಿಸಿ ವರದಿ ತಿಳಿಸಿದೆ.

ನವೆಂಬರ್ 2018ರಲ್ಲಿ ಪಿಒಕೆಯಿಂದ ಈ ಇಬ್ಬರೂ ನಾಪತ್ತೆಯಾಗಿದ್ದರು. ಅಕ್ರಮವಾಗಿ ಗಡಿ ದಾಟಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.