ಮನಿಲಾ: ಏಷ್ಯಾದ ನೊಬೆಲ್ ಎಂದೇ ಹೆಸರಾದ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾರತದ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಭಾಜನರಾಗಿದ್ದಾರೆ.

ಎನ್‌ಡಿಟಿವಿ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರವೀಶ್ ಅವರು ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಒಬ್ಬರು.

ಬಿಹಾರದ ಜಿತ್ವಾರ್‌ಪುರದಲ್ಲಿ ಜನಿಸಿದ ರವೀಶ್ ಅವರು, 1996ರಲ್ಲಿ ನವದೆಹಲಿ ಟೆಲಿವಿಷನ್ ನೆಟ್‌ವರ್ಕ್ (ಎನ್‌ಡಿಟಿವಿ) ಸೇರಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದರು. ಅವರು ನಿತ್ಯ ನಡೆಸಿಕೊಡುವ ‘ಪ್ರೈಮ್ ಟೈಮ್’ ಜನಪ್ರಿಯವಾಗಿದೆ.

ಜನಸಾಮಾನ್ಯರ ನೈಜ ಬದುಕು, ಸಮಸ್ಯೆಗಳ ಕುರಿತು ಸೂಕ್ಷ್ಮವಾಗಿ ತಮ್ಮ ಕಾರ್ಯಕ್ರಮದಲ್ಲಿ ಕಟ್ಟಿಕೊಡುವ ಅವರು, ‘ಜನರ ಸಮಸ್ಯೆಗಳಿಗೆ ಧ್ವನಿಯಾದರೆ ಪತ್ರಕರ್ತರಾದಂತೆ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.