ಸಿಂಗಪುರ: ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ಮೂಲದ ವ್ಯಕ್ತಿ ಇಲ್ಲಿ ಜೈಲುಪಾಲಾಗಿದ್ದಾನೆ.

ಸಿಂಗಪುರ ವಿಮಾನದ ಗಗನಸಖಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಪರಾಂಜಪೆ ನಿರಂಜನ್ ಜಯಂತ್ ವಿರುದ್ಧ ಆಗಸ್ಟ್ನಲ್ಲಿ ದೂರು ದಾಖಲಾಗಿತ್ತು. ಇದೀಗ ಆತನಿಗೆ ಮೂರು ವಾರ ಜೈಲು ಶಿಕ್ಷೆ ವಿಧಿಸಲಾಗಿದೆ.

‘ಸಿಡ್ನಿಯಿಂದ ಸಿಂಗಪುರಕ್ಕೆ ಪ್ರಯಾಣ ಮಾಡುತ್ತಿದ್ದ ವಿಮಾನದಲ್ಲಿ ಗಗನಸಖಿಯನ್ನು ಜಯಂತ್ ಹಲವಾರು ಬಾರಿ ಮಾತನಾಡಿಸಿ ದೂರವಾಣಿ ಸಂಖ್ಯೆ ಕೇಳಿದ್ದ. ಇದಕ್ಕೆ ಪ್ರತಿಕ್ರಿಯಿಸದೆ ಗಗನಸಖಿ ನಿರ್ಲಕ್ಷಿಸಿದ್ದರು. ನಂತರ ಆಕೆಯ ಎಡ ತೊಡೆಯನ್ನು ಚಿವುಟಿದ್ದ. ಬಳಿಕ ಮುಂದಿನ ಕ್ಯಾಬಿನ್ಗೆ ಹೋಗಿ ‘ನೀವು ಸುಂದರವಾಗಿದ್ದೀರಿ’ ಎಂದು ಹೇಳಿದ್ದಲ್ಲದೆ, ಮೊಬೈಲ್ ಸಂಖ್ಯೆ ನೀಡುವಂತೆ ಒತ್ತಾಯಿಸಿದ್ದ. ಈ ಕುರಿತು ಗಗನಸಖಿ ದೂರು ನೀಡಿದ್ದರು’ ಎಂದು ಪ್ರಾಸಿಕ್ಯೂಟರ್ ಜೇಮ್ಸ್ ಚೆವ್ ತಿಳಿಸಿದ್ದಾರೆ.

‘ನಾನು ತುಂಬಾ ಕುಡಿದಿದ್ದೆ, ಆ ನಶೆಯಲ್ಲಿ ಹೀಗೆ ವರ್ತಿಸಿದ್ದೆ’ ಎಂದು ಜಯಂತ್ ತಪ್ಪೊಪ್ಪಿಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.