ಲಂಡನ್: ಬ್ರಿಟನ್ನ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವುದನ್ನು ಭಾರತೀಯ ವಿದ್ಯಾರ್ಥಿಗಳು ಮುಂದೂಡುತ್ತಿದ್ದಾರೆ. ಈ ಬೆಳವಣಿಗೆಯು ಈಗಾಗಲೇ ಸೀಮಿತ ಬಜೆಟ್ ಹೊಂದಿರುವ ವಿಶ್ವವಿದ್ಯಾಲಯಗಳ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಧ್ಯಯನ ವರದಿಯೊಂದು ಉಲ್ಲೇಖಿಸಿದೆ.

ಇಂಗ್ಲೆಂಡ್ನಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಸ್ಥಿರತೆ ಕುರಿತ ವರದಿಯ ಪ್ರಕಾರ, 2022–23ನೇ ಶೈಕ್ಷಣಿಕ ವರ್ಷದಲ್ಲಿ1,39,914 ಭಾರತೀಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2023–24ರ ಸಾಲಿಗೆ ಆ ಸಂಖ್ಯೆ 1,11,329 ಲಕ್ಷಕ್ಕೆ ಕುಗ್ಗಿದೆ.

ಭಾರತ ಮೂಲದ ವಿದ್ಯಾರ್ಥಿಗಳ ಸಮೂಹದ ಪ್ರಕಾರ, ‘ವಿದ್ಯಾರ್ಥಿಗಳ ಪ್ರವೇಶಾತಿ ಇಳಿಕೆಯು ನಿರೀಕ್ಷಿತ. ಸೀಮಿತ ಉದ್ಯೋಗಾವಕಾಶ ಮತ್ತು ಕೆಲ ನಗರಗಳಲ್ಲಿನ ವಲಸೆ ವಿರೋಧಿ ಗಲಭೆಗಳಿಂದ ಸುರಕ್ಷತೆ ಇಲ್ಲದಿರುವುದು ಇದಕ್ಕೆ ಕಾರಣ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.