ಪೆಶಾವರ: ಫೇಸ್ಬುಕ್ ಗೆಳೆಯನ ಭೇಟಿಗಾಗಿ ಪಾಕಿಸ್ತಾನಕ್ಕೆ ಬಂದಿರುವ ಭಾರತದ ವಿವಾಹಿತ ಮಹಿಳೆ ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20ರಂದು ತನ್ನ ದೇಶಕ್ಕೆ ಮರಳಲಿದ್ದಾರೆ ಎಂದು ಅವರ ಸ್ನೇಹಿತ ನಸ್ರುಲ್ಲಾ ಸೋಮವಾರ ತಿಳಿಸಿದ್ದಾರೆ.

ರಾಜಸ್ಥಾನದ ಅಲ್ವಾರ್ ಜಿಲ್ಲೆಯ 34 ವರ್ಷದ ಅಂಜು ಎಂಬುವವರು ಫೇಸ್ಬುಕ್ ಗೆಳೆಯ 29 ವರ್ಷದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಅಪ್ಪರ್ ದಿರ್ ಜಿಲ್ಲೆಗೆ ಪಾಕಿಸ್ತಾನದ ವೀಸಾ ಪಡೆದು ತೆರಳಿದ್ದರು.

‘ನಮ್ಮ ಗೆಳೆತನವನ್ನು ಪ್ರೇಮದ ದೃಷ್ಟಿಕೋನದಿಂದ ನೋಡಬೇಡಿ. ನನಗೆ ಅಂಜು ಅವರನ್ನು ಮದುವೆಯಾಗುವ ಉದ್ದೇಶವಿಲ್ಲ. ವೀಸಾ ಅವಧಿ ಮುಗಿದ ಮೇಲೆ ಅಂಜು ಅವರು ಭಾರತಕ್ಕೆ ಮರಳಲಿದ್ದಾರೆ. ಅವರಿಗೆ ಉಳಿದುಕೊಳ್ಳಲು ಮನೆಯಲ್ಲಿ ಪ್ರತ್ಯೇಕ ಕೊಠಡಿ ನೀಡಲಾಗಿದೆ ಮತ್ತು ಜಿಲ್ಲಾಡಳಿತದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ’ ಎಂದು ನಸ್ರುಲ್ಲಾ ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

ಜೈಪುರಕ್ಕೆ ತೆರಳುವುದಾಗಿ ಹೇಳಿ ಅಂಜು ಅವರು ಗುರುವಾರ ಮನೆಯಿಂದ ಹೊರಟಿದ್ದರು. ಬಳಿಕ ತಾನು ಲಾಹೋರ್ನಲ್ಲಿರುವುದಾಗಿ ಸಹೋದರಿಗೆ ಕರೆ ಮಾಡಿ ತಿಳಿಸಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

2019ರಲ್ಲಿ ಅಂಜು ಅವರಿಗೆ ಫೇಸ್ಬುಕ್ನಲ್ಲಿ ನಸ್ರುಲ್ಲಾ ಅವರ ಪರಿಚಯವಾಗಿತ್ತು. ಅಂಜು ಆಗಮನದ ನಿರೀಕ್ಷೆಯಲ್ಲಿ ಪತಿ ಅರವಿಂದ್, 15 ವರ್ಷದ ಮಗಳು ಹಾಗೂ ಆರು ವರ್ಷದ ಮಗ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.