ಕೋವಿಡ್- 19 ಪಿಡುಗಿನ ಬಳಿಕ ಜಗತ್ತಿನಲ್ಲೇ ಅತಿ ಹೆಚ್ಚು ತೊಂದರೆಗೀಡಾದ ದೇಶವೆಂದರೆ, ಚೀನಾ. ಸಾಂಕ್ರಾಮಿಕ ರೋಗದಿಂದಾಗಿ ಇತರ ದೇಶಗಳು ಸಂಕಟ, ಸಾವುಗಳು ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಬೀಜಿಂಗ್ ಮಾತ್ರವೇ ತೃಪ್ತಿಯಿಂದಿರುವ ರೀತಿಯನ್ನು ಭಾರತ ಮಾತ್ರವಲ್ಲದೆ ಇತರ ಹಲವು ದೇಶಗಳು ದೂಷಿಸುತ್ತಿವೆ. ಕೋವಿಡ್ ಸೋಂಕಿನ ಮೂಲ ವುಹಾನ್ ಎಂದು ಇತರ ದೇಶಗಳ ನಿರೂಪಣೆಗಳನ್ನು ಒಪ್ಪಿಕೊಳ್ಳಲು ಚೀನಾ ನಿರಾಕರಿಸಿದೆ.

ಸುಮಾರು 3,488 ಕಿ.ಮೀ. ಉದ್ದವಿರುವ ಹಿಮಾಲಯದ ಮೂಲಕ ವಿವಾದಿತ, ಗುರುತಿಸದ ಗಡಿಯುದ್ದಕ್ಕೂ ಇರುವ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತು ಸದಾ ಪ್ರಯತ್ನಿಸುತ್ತಿರುವ ನೆರೆಯ ಕಮ್ಯುನಿಸ್ಟ್ ದೇಶದ ಪ್ರಾಬಲ್ಯವನ್ನು ಭಾರತೀಯ ರಾಜಕಾರಣಿಗಳು ದೊಡ್ಡ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದಾರೆ. 1962ರಿಂದ ಯುದ್ಧವನ್ನು ಕಂಡಿರದ ಪರಮಾಣು-ಶಸ್ತ್ರಸಜ್ಜಿತ ಏಷ್ಯಾದ ಈ ಎರಡು ದೇಶಗಳು, ಜೂನ್-2020ರ ಮಧ್ಯಭಾಗದಲ್ಲಿ ಲಡಾಖ್‌ನ ಗ್ಯಾಲ್ವಾನ್ ಕಣಿವೆಯಲ್ಲಿ ರಕ್ತಸಿಕ್ತ ಚಕಮಕಿಗಳೊಂದಿಗೆ ಪಣಕ್ಕೆ ಒಡ್ಡಿಕೊಂಡಿವೆ. ಈ ಆಕ್ರಮಣಕಾರಿ ಹೋರಾಟವು ಕನಿಷ್ಠ ಎರಡು ಡಜನ್ ಭಾರತೀಯ ಸೈನಿಕರ ಪ್ರಾಣವನ್ನು ಬಲಿತೆಗೆದುಕೊಂಡಿತು. ಗ್ಯಾಲ್ವಾನ್‌ನಲ್ಲಿ ಚೀನಾ "ಅಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು" ಬಳಸಿದೆ ಎಂದು ಭಾರತದ ರಕ್ಷಣಾ ಸಚಿವಾಲಯವು ಹೇಳಿದೆ. ಈ ಮುಖಾಮುಖಿಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಎಷ್ಟು ಮಂದಿ ಸತ್ತರು ಎಂಬುದನ್ನು ಚೀನಾ ಇದುವರೆಗೆ ಬಹಿರಂಗಪಡಿಸಿಲ್ಲ. ಭಾರತದೊಂದಿಗಿನ ಮಾತುಕತೆಯಲ್ಲಿ, ಚೀನಾದ ಅಧಿಕಾರಿಗಳು 5 ಮತ್ತು 14ರ ನಡುವಿನ ಸಾವು-ನೋವುಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಕೈ-ಕೈ ಮಿಲಾಯಿಸಿದ ಕಾಳಗದಲ್ಲಿ 45 ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆಯಾದ ಟಿಎಎಸ್ಎಸ್ ವರದಿ ಮಾಡಿದೆ. ಗ್ಯಾಲ್ವಾನ್ ಕಣಿವೆ ತನ್ನ ಗಡಿಯೊಳಗೆ ಇದೆ ಎಂದು ಚೀನಾ ಒತ್ತಿ ಹೇಳುತ್ತಿದೆ.

ಘಟನೆಯ ಬಳಿಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಕೆರಳಿಸಿದರೆ ತಕ್ಕ ಪ್ರತ್ಯುತ್ತರ ನೀಡಲು ಸಮರ್ಥವಾಗಿದೆ" ಎಂದಿದ್ದರು. ಆದರೆ, ವಿವಾದಿತ ಪ್ರದೇಶದಲ್ಲಿ ಭಾರತವು ತನ್ನ ಸ್ನಾಯುಗಳನ್ನು ಹಿಗ್ಗಿಸಬಲ್ಲದೇ ಮತ್ತು ಪರಿಣಾಮಕಾರಿ ಪಾತ್ರವನ್ನು ವಹಿಸಬಹುದೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ವಾಸ್ತವ ಸ್ಥಿತಿಯನ್ನು ಗಮನಿಸಿದರೆ, ಬಲಿಷ್ಠ ಚೀನಾವನ್ನು ನೇರವಾಗಿ ಎದುರಿಸುವುದು ಭಾರತಕ್ಕೆ ಅಷ್ಟು ಸುಲಭವಲ್ಲ. ಅದರೂ, ಚೀನಾದ ಏಳಿಗೆಗೆ ಕಡಿವಾಣ ಹಾಕಲು ಭಾರತವು ಅಮೆರಿಕದ ಜತೆಗೆ ಸಹಯೋಗ ಹೊಂದುವುದರಿಂದ ಕಮ್ಯುನಿಸ್ಟ್ ದೇಶಕ್ಕೆ ಚುರುಕು ಮುಟ್ಟಿಸಬಹುದು.

ಚೀನಾದ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯು ವೃದ್ಧಿಸುತ್ತಿರುವ ಬಗ್ಗೆ ಜಗತ್ತಿಗೆ ತಿಳಿದಿದೆ. ತನ್ನ ಭೌತಿಕ ಗಡಿಯನ್ನು ವಿಸ್ತರಿಸುವ ದುರಾಶೆ ಮತ್ತು ಸಮುದ್ರದ ನೀರಿನ ಮೇಲೆ ಪ್ರಾಬಲ್ಯವು ಕೂಡ ಎಲ್ಲರಿಗೂ ಗೊತ್ತಿರುವ ರಹಸ್ಯವಾಗಿದೆ. ಭಾರತದ ರಕ್ಷಣಾ ವಿಭಾಗಗಳ ಸಂಯೋಜಿತ ಶಕ್ತಿ, ರಾಜಕೀಯ ನಿರ್ಧಾರಗಳು ಮತ್ತು ಆರ್ಥಿಕ ಶಕ್ತಿಯು ಪ್ರಬಲ ಚೀನಾಕ್ಕೆ ಒಂದೆರಡು ಪಾಠಗಳನ್ನು ಕಲಿಸಲು ಪರ್ಯಾಪ್ತವಾಗುವುದಿಲ್ಲ. ಭಾರತವು ತನ್ನ ಅತಿದೊಡ್ಡ ಸೇನಾಬಲದ ಬಗ್ಗೆ ಹೆಮ್ಮೆಪಡಬಹುದು. ಆದರೆ ಬೃಹತ್ ಸೈನ್ಯವನ್ನು ಹೊಂದಿರುವ ಜಾಗತಿಕ ಶ್ರೇಯಾಂಕದಲ್ಲಿ ಅದು ಚೀನಾಕ್ಕಿಂತ ಕೆಳಗಿದೆ. ಇದಲ್ಲದೆ, ನೆರೆಹೊರೆಯಲ್ಲಿ ಚೀನಾ ಮತ್ತು ಪಾಕಿಸ್ತಾನದಂತಹ ಶತ್ರು ರಾಷ್ಟ್ರಗಳಿದ್ದರೂ ಸೇನೆಯನ್ನು ನಿರೀಕ್ಷಿತ ಮಟ್ಟಕ್ಕೆ ಆಧುನೀಕರಿಸುವಲ್ಲಿ ಭಾರತವು ವಿಫಲವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಕೊರೊನಾ ವೈರಸ್-ಪ್ರಚೋದಿತ ಅಂಧಕಾರದ ಹಂತವು ರಕ್ಷಣಾ ಕ್ಷೇತ್ರಕ್ಕಾಗಿ ನಿಧಿ ಹಂಚಿಕೆಯನ್ನು ಧಿಕ್ಕೆಡಿಸಿದೆ.

ವಾಸ್ತವ ಬೇರೆಯೇ ಇದೆ

2021-22ರಲ್ಲಿ, ಭಾರತದ ಒಟ್ಟು ರಕ್ಷಣಾ ಆಯವ್ಯಯವು 4,78,195.62 ಕೋಟಿ ರೂ. ಆಗಿತ್ತು. ಇದು ಕೇಂದ್ರ ಸರ್ಕಾರದ ಒಟ್ಟು ವೆಚ್ಚಗಳ 13.73% ಮತ್ತು ಜಿಡಿಪಿಯ 2.15% ಆಗಿದೆ. ಸಂಸದೀಯ ಸಮಿತಿಯ ವರದಿ ಪ್ರಕಾರ, ಆರ್ಥಿಕ ವರ್ಷಕ್ಕೆ ಯೋಜಿತ 6,22,800.51 ಕೋಟಿ ರೂ.ಗಳಲ್ಲಿ ಒಟ್ಟು ರಕ್ಷಣಾ ಆಯವ್ಯಯಕ್ಕೆ 4,78,195.62 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಇದು 1,44,604.89 ಕೋಟಿ ರೂ.ಗಳ ಕೊರತೆಯನ್ನು ಸೂಚಿಸುತ್ತದೆ. ರಕ್ಷಣಾ ಸಚಿವಾಲಯದ ಬಂಡವಾಳ ಆಯವ್ಯಯವು ಕೇಂದ್ರ ಸರ್ಕಾರದ ಒಟ್ಟು ಬಂಡವಾಳ ವೆಚ್ಚದ ಸುಮಾರು 25.30% ಆಗಿದೆ. ರಕ್ಷಣೆಯ ಒಟ್ಟು ಬಂಡವಾಳದ ವೆಚ್ಚದಲ್ಲಿ, ಕೇವಲ 25% ಹೊಸ ಸೇನಾ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಕೆಯಾಗುತ್ತದೆ. ನಿಖರವಾಗಿ ಹೇಳಬೇಕೆಂದರೆ, 2016-17ರಿಂದ ಸಶಸ್ತ್ರ ಪಡೆಗಳ ಆಧುನೀಕರಣಕ್ಕಾಗಿ ಬಂಡವಾಳ ಸಂಗ್ರಹವು 41,463.21 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಸಹಜವಾಗಿ, ಧನಾತ್ಮಕ ಅಂಶಗಳನ್ನು ಪರಿಗಣಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಂಡವಾಳ ಹೂಡಿಕೆಯ ಹೆಚ್ಚಳವು ಸುಮಾರು 19% ಆಗಿದೆ ಮತ್ತು ಕಳೆದ 15 ವರ್ಷಗಳಲ್ಲಿ ಇದು ಗರಿಷ್ಠ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಆಧುನೀಕರಣದ ಅಭಿಯಾನಕ್ಕೆ ಚಾಲನೆ ನೀಡಲು ಇದು ಸಹಾಯ ಮಾಡುತ್ತದೆ, ಆದಾಯ ಮತ್ತು ಪಿಂಚಣಿಗಳು ಅದರ ಬಹುಪಾಲನ್ನು ಕಸಿದುಕೊಳ್ಳುವುದಿಲ್ಲ. ಈ ಎಲ್ಲಾ ಕ್ರಮಗಳ ಹೊರತಾಗಿಯೂ, 2020ರಲ್ಲಿ ಭಾರತದ ಮಿಲಿಟರಿ ವೆಚ್ಚವು $ 72.9 ಶತಕೋಟಿ ಆಗಿದ್ದರೆ, ಚೀನಾದ್ದು (ಅಂದಾಜು) $ 252 ಶತಕೋಟಿ ಆಗಿದೆ. $ 778 ಶತಕೋಟಿಯೊಂದಿಗೆ ಅಮೆರಿಕವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಈ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ, ಸಶಸ್ತ್ರ ಪಡೆಗಳನ್ನು ಬಲಪಡಿಸಲು ಸಾಕಷ್ಟು ಪ್ರಮಾಣದ ಸುಧಾರಿತ ಉಪಕರಣಗಳನ್ನು ಖರೀದಿಸುವುದು ಭಾರತಕ್ಕೆ ಸಾಧ್ಯವಿಲ್ಲ. ಅಲ್ಲದೆ, ಸುಧಾರಿತ ವಿಮಾನಗಳು, ಶಬ್ದಾತೀತ ಕ್ಷಿಪಣಿಗಳು, ಆಳ ಸಮುದ್ರದಲ್ಲಿ ಕಾರ್ಯಾಚರಿಸಬಲ್ಲ ಡ್ರೋನ್‌ಗಳು, ವಿಮಾನದ ಎಂಜಿನ್‌ಗಳು, ಮಲ್ಟಿ-ಬ್ಯಾರೆಲ್ ರಾಕೆಟ್‌ಗಳು ಮತ್ತು ಇತರ ಹೆಚ್ಚು ಅಗತ್ಯವಿರುವ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದೇಶೀಯ ತಯಾರಿಕೆಯಲ್ಲಿ ಭಾರತವು ಅಷ್ಟಾಗಿ ತೊಡಗಿಸಿಕೊಂಡಿಲ್ಲ.

ಈ ದೌರ್ಬಲ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಭಾರತವು ಚೀನಾ ಮತ್ತು ಪಾಕಿಸ್ತಾನವನ್ನು ನಿಭಾಯಿಸಲು ಸಹಯೋಗದ ಪ್ರಯತ್ನವನ್ನು ಹುಡುಕುತ್ತಿದೆ. ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯ ಮೇಲೆ ತನ್ನ ಹಿಡಿತವನ್ನು ವಿಸ್ತರಿಸಲು ಚೀನಾವು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಐದು ಬಂದರುಗಳನ್ನು ನಿರ್ಮಿಸುತ್ತಿದೆ. ಇದು ಭಾರತಕ್ಕೆ ಮಾತ್ರವಲ್ಲ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೂ ಅನನುಕೂಲತೆಯನ್ನು ಉಂಟುಮಾಡುತ್ತದೆ. ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸುವ ಕಾರ್ಯತಂತ್ರದ ಸಮಿತಿಯಾದ ಕ್ವಾಡ್‌ಗೆ ಉತ್ತೇಜನ ನೀಡಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿದೆ. ಜಪಾನ್‌ನ ಉಪಕ್ರಮದ ಪರಿಣಾಮವಾಗಿ ಈ ಅನೌಪಚಾರಿಕ ಗುಂಪು 2007ರಲ್ಲಿ ರೂಪುಗೊಂಡಿತು. ಚೀನಾದ ಬೆದರಿಸುವ ತಂತ್ರಗಳಿಂದಾಗಿ, ಆಸ್ಟ್ರೇಲಿಯಾವು 2008ರಲ್ಲಿ ಹಿಂದೆ ಸರಿಯಿತು. ಆದರೆ 2010ರಲ್ಲಿ ಮತ್ತೆ ಸೇರಿಕೊಂಡಿತು. ಪ್ರಧಾನವಾಗಿ ಕ್ವಾಡ್‌ನ ವಿರೋಧಿ ಚೀನಾಕ್ಕೆ ಬಲವಾದ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಸೆಪ್ಟೆಂಬರ್ 2021ರಲ್ಲಿ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕ್ವಾಡ್ ನಾಯಕರ ಮೊದಲ ವೈಯಕ್ತಿಕ ಶೃಂಗಸಭೆಯನ್ನು ಆಯೋಜಿಸಿದರು. ತಮ್ಮ ಸ್ನೇಹಿತರೊಂದಿಗೆ ಪೂರೈಕೆ ಸರಪಳಿ, ಜಾಗತಿಕ ಭದ್ರತೆ, ಹವಾಮಾನ ಕ್ರಮ, ಕೋವಿಡ್ ಪ್ರತಿಕ್ರಿಯೆ ಅಥವಾ ತಂತ್ರಜ್ಞಾನ-ಸಹಕಾರ ಮುಂತಾದ ಯಾವುದೇ ವಿಷಯವನ್ನು ಚರ್ಚಿಸಲು ಸಂತೋಷಪಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಹೇಳಿದರು.

ಆದರೂ, ಅಂತಹ ಅನೌಪಚಾರಿಕ ಗುಂಪುಗಳಿಂದ ಚೀನಾವನ್ನು ಆತಂಕಕ್ಕೆ ಒಳಪಡಿಸಲು ಸಾಧ್ಯವಾಗದು. ಏಕೆಂದರೆ, ಕ್ವಾಡ್ ದೇಶಗಳಿಗೆ ಮಾತ್ರವಲ್ಲದೆ ಇತರರಿಗೂ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ಅಮೆರಿಕವು ತನ್ನ ಕಾರ್ಡ್‌ಗಳನ್ನು ಸುರಕ್ಷಿತವಾಗಿ ಆಡಬಹುದು ಎಂದು ಚೀನಾಕ್ಕೆ ಗೊತ್ತಿರುತ್ತದೆ. ರಕ್ಷಣಾ ಸಾಧನಗಳ ವಿಶ್ವದ ಅತಿದೊಡ್ಡ ರಫ್ತುದಾರನಾಗಿರುವ ಅಮೆರಿಕಕ್ಕೆ ವ್ಯವಹಾರವೇ ಹೆಚ್ಚು ಮುಖ್ಯವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ತನ್ನ ವ್ಯಾಪಾರ ಮಳಿಗೆಯನ್ನು ತೆರೆಯಲು ಅದು ಹಿಂಜರಿಯುವುದಿಲ್ಲ. 2019ರವರೆಗೂ ಶಸ್ತ್ರಾಸ್ತ್ರ ಮಾರಾಟ ಸೇರಿದಂತೆ ಎಲ್ಲ ರೀತಿಯ ಬೆಂಬಲವನ್ನು ಅಮೆರಿಕವು ಪಾಕಿಸ್ತಾನಕ್ಕೆ ನೀಡಿದ್ದನ್ನು ಭಾರತವು ಮರೆಯುವಂತಿಲ್ಲ. ಭಾರತ ಮತ್ತು ಚೀನಾ ಎರಡರೊಂದಿಗೂ ರಷ್ಯಾ ದೇಶವು ತನ್ನದೇ ಆದ ಶಸ್ತ್ರಾಸ್ತ್ರ ಮಾರಾಟ ವ್ಯವಹಾರವನ್ನು ಹೊಂದಿದೆ. ಚೀನಾ ದೇಶವು ತನ್ನ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಮಾರುತ್ತದೆ. ಹಾಗಾಗಿ, ಚೀನಾವನ್ನು ದುರ್ಬಲಗೊಳಿಸಿ ಮಂಡಿಯೂರುವಂತೆ ಮಾಡಲು ಭಾರತವು ಅಮೆರಿಕ ಅಥವಾ ಇತರ ಯಾವುದೇ ಸೌಹಾರ್ದ ರಾಷ್ಟ್ರದ ಮೇಲೆ ಅವಲಂಬಿಸಲು ಸಾಧ್ಯವಿಲ್ಲ.

ಒತ್ತಡ ತಂತ್ರಗಳು

ಚೀನಾವನ್ನು ತಹಬದಿಗೆ ತರಲು ಭೌಗೋಳಿಕ ರಾಜಕೀಯ ಒತ್ತಡ ಸ್ವಲ್ಪ ಮಟ್ಟಿಗೆ ಕೆಲಸ ಮಾಡಬಹುದು. ಆದರೆ ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆಯ ವಿಷಯಕ್ಕೆ ಬಂದಾಗ, ಚೀನಾ ಬಲಿಷ್ಠವಾಗಿದೆ. ನಮ್ಮ ದೇಶದಲ್ಲಿ ಚೀನಾದ ವ್ಯಾಪಾರ ಮತ್ತು ಆರ್ಥಿಕ ಹೆಜ್ಜೆಗುರುತುಗಳಿಗೆ ಹಲವು ಬಗೆಯಲ್ಲಿ ಅಡೆತಡೆಗಳನ್ನು ಒಡ್ಡಲು ಭಾರತವು ಪ್ರಯತ್ನಗಳನ್ನು ಮಾಡಿದೆ. 2020ರಲ್ಲಿ, ಚೀನೀ ಕಂಪನಿಗಳ ಯಾವುದೇ ಹೂಡಿಕೆಗಳಿಗೆ ಸರ್ಕಾರದ ಅನುಮೋದನೆಯ ಅಗತ್ಯವಿರುವ ಕಾನೂನನ್ನು ಅದು ಅಂಗೀಕರಿಸಿತು. ಮೇ ತಿಂಗಳಲ್ಲಿ, ಭಾರತದ ಟೆಲಿಕಾಂ ಸಚಿವಾಲಯವು 5G ಪ್ರಯೋಗಗಳಿಂದ ಚೀನಾದ ಉಪಕರಣ ತಯಾರಕರಾದ ಹುವಾವೆ (Huawei) ಮತ್ತು ZTE ಸಂಸ್ಥೆಗಳನ್ನು ಕೈಬಿಟ್ಟಿತು. ಯಾವುದೇ ಅಧಿಕೃತ ನಿಷೇಧವಿಲ್ಲ, ಆದರೆ ಚೀನಾದ ಸಂಸ್ಥೆಗಳಿಗೆ ಹೊಸ ಒಪ್ಪಂದಗಳನ್ನು ನೀಡುವುದನ್ನು ತಡೆಯಲು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಕೇಳಲಾಗಿದೆ. ಇ-ಕಾಮರ್ಸ್ ಕಂಪನಿಗಳು ತಾವು ಮಾರಾಟ ಮಾಡುವ ಉತ್ಪನ್ನಗಳಿಗೆ ಮೂಲ ದೇಶದ ಹೆಸರನ್ನು ಪ್ರದರ್ಶಿಸಲು ಸರ್ಕಾರವು ಕೇಳಿದೆ ಎಂದು ವರದಿಯಾಗಿದೆ. ಗ್ಯಾಲ್ವಾನ್ ಘಟನೆಯ ಬಳಿಕ ಭಾರತದಲ್ಲಿ ಚೀನಾ ವಿರೋಧಿ ಭಾವನೆ ಹೆಚ್ಚಾಗಿತ್ತು. ಆದರೆ ವ್ಯಾಪಾರದ ಅಂಕಿಅಂಶಗಳು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳು ಸ್ಥಿರವಾಗಿವೆ ಎಂದು ತೋರಿಸುತ್ತವೆ. ಭಾರತವು ಇನ್ನೂ ವಿಶ್ವದ ಮೂರನೇ ಅತಿದೊಡ್ಡ ಔಷಧೀಯ ಉದ್ಯಮವಾಗಿ ಉಳಿದಿದ್ದು, ಇದಕ್ಕೆ ಬಳಸುವ ಪ್ರಧಾನ ಪದಾರ್ಥಗಳನ್ನು ಚೀನಾದಿಂದ ಮೂರನೇ ಎರಡರಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. 2020–21ರ ಆರ್ಥಿಕ ವರ್ಷದ ಮೊದಲಾರ್ಧದಲ್ಲೂ ಭಾರತವು ಚೀನಾದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಮುಂದುವರಿದಿದೆ. 2020 ಮತ್ತು ಅದರಾಚೆಗಿನ ಒಟ್ಟಾರೆ ವ್ಯಾಪಾರದಲ್ಲಿ 32% ಕುಸಿತಕ್ಕೆ ಹೋಲಿಸಿದರೆ ದ್ವಿಪಕ್ಷೀಯ ವ್ಯಾಪಾರವು ಕೇವಲ 15% ದಷ್ಟು ಕಡಿಮೆಯಾಗಿದೆ. ಚೀನಾದ ಒಟ್ಟು ರಫ್ತಿನಲ್ಲಿ ಭಾರತದ ಪಾಲು ಕೇವಲ 2.6% ಇರುವ ಕಾರಣ, ಅದು ನಷ್ಟವಾದರೂ ಆ ಬಗ್ಗೆ ಚೀನಾ ಹೆಚ್ಚು ಚಿಂತೆ ಮಾಡುವುದಿಲ್ಲ.

ಸೀಮಿತ ಆಯ್ಕೆಗಳು

ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ ಹಣವು ಆಳವಾಗಿ ಬೇರೂರಿದೆ ಎಂಬುದು ಸತ್ಯ. ಈ ವಿಚಾರದಲ್ಲಿ ಕುರುಡಾಗಿರಲು ಭಾರತಕ್ಕೆ ಸಾಧ್ಯವಿಲ್ಲ. ಅಲಿಬಾಬಾದಂತಹ ಚೀನಾದ ದೈತ್ಯ ಸಂಸ್ಥೆಗಳು ಭಾರತೀಯ ನವೋದ್ಯಮಗಳಾದ ಪೇಟಿಎಂ, ಓಲಾ, ಬಿಗ್ ಬಾಸ್ಕೆಟ್ ಮತ್ತು ಜೊಮ್ಯಾಟೋಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಹೂಡಿಕೆ ಮಾಡಿವೆ.
ಪರಿಸ್ಥಿತಿ ಹೀಗಿರುವಾಗ, ಚೀನಾವನ್ನು ದೂರವಿಡುವ ಮತ್ತು ದಕ್ಷಿಣ ಏಷ್ಯಾದಲ್ಲಿ ನಾಯಕನಾಗಿ ಹೊರಹೊಮ್ಮುವ ಮೊದಲು ಭಾರತವು ರಕ್ಷಣಾ ವಲಯವನ್ನು ಸಶಕ್ತಗೊಳಿಸಲು ಮತ್ತು ಉತ್ಪಾದನಾ ವಲಯದಲ್ಲಿ ಹೆಚ್ಚು ಸ್ವಾವಲಂಬಿಯಾಗಲು ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕಾಗಿದೆ. ಈ ಬೆಳವಣಿಗೆಗಳು ಸಂಭವಿಸುವ ತನಕ, ಭಾರತವು ರಾಷ್ಟ್ರೀಯತೆಯ ಘೋಷಣೆಗಳನ್ನು ಮಾಡುತ್ತಲೇ ಇರುತ್ತದೆ.

– ಗಿರೀಶ್ ಲಿಂಗಣ್ಣ, ವ್ಯವಸ್ಥಾಪಕ ನಿರ್ದೇಶಕರು, ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ (ರಕ್ಷಣಾ ಸಾಮಗ್ರಿ ಉತ್ಪಾದಿಸುವ ಇಂಡೋ -ಜರ್ಮನ್ ಸಂಸ್ಥೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.