ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯ ಬರಬೇಡಿ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ.
Published : 2 ಅಕ್ಟೋಬರ್ 2024, 7:41 IST
Last Updated : 2 ಅಕ್ಟೋಬರ್ 2024, 7:41 IST
ಫಾಲೋ ಮಾಡಿ
Comments

ಟೆಹರಾನ್: ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದೆ.

ದಾಳಿ ವಿಚಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯುವಂತೆ, ಇಸ್ರೇಲ್ ನಮ್ಮ ನಡುವಿನ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚ್ಚಿ ತಿಳಿಸಿದ್ದಾರೆ.

ಇಸ್ರೇಲ್ ಸ್ಟೇಟ್ ಮೀಡಿಯಾ ಚಾನಲ್‌ಗೆ ನೀಡಿರುವ ಅವರ ಹೇಳಿಕೆಯನ್ನು ಟೆಹರಾನ್‌ನಲ್ಲಿರುವ ಸ್ವೀಸ್ ರಾಯಭಾರ ಕಚೇರಿಯಿಂದ ಪ್ರಸಾರ ಮಾಡಲಾಗಿದೆ.

ಈಗಾಗಲೇ ಇರಾನ್, ಇಸ್ರೇಲ್ ಮೇಲೆ ದಾಳಿ ಮಾಡುವುದನ್ನು ತಡೆಯಿರಿ ಎಂದು ತನ್ನ ಪಡೆಗಳಿಗೆ ಪೆಂಟಗಾನ್ ಆದೇಶ ಮಾಡಿದೆ.

ಮಂಗಳವಾರ ರಾತ್ರಿ ಇಸ್ರೇಲ್ ಮೇಲೆ 200 ಕ್ಕೂ ಹೆಚ್ಚು ಕ್ಷೀಪಣಿಗಳನ್ನು ಇರಾನ್ ಉಡಾಯಿಸಿದೆ. ಇನ್ನೊಂದೆಡೆ ಇರಾನ್ ಬೆಂಬಲಿತ ಶಂಕಿತ ಉಗ್ರರು ಟೆಲ್ ಅವೀವ್‌ನಲ್ಲಿ ಮನಸೋಇಚ್ಚೆ ಗುಂಡು ಹಾರಿಸಿ ಎಂಟು ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ.

ಇಸ್ರೇಲ್‌ ಪಡೆ ಇತ್ತೀಚೆಗೆ ಹಿಜ್ಬುಲ್ಲಾ ಮೇಲೆ ನಡೆಸಿದ ದಾಳಿ ಮತ್ತು ಉನ್ನತ ಕಮಾಂಡರ್‌ಗಳ ಹತ್ಯೆಯ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT