ಬೈರೂತ್ : ಇಸ್ಲಾಮಿಕ್ ಸ್ಟೇಟ್(ಐಎಸ್)ನ ನಾಯಕ ಅಬು ಅಲ್-ಹುಸೇನ್ ಅಲ್-ಹುಸೇನಿ ಅಲ್-ಖುರೇಷಿ ಹತನಾಗಿರುವುದಾಗಿ ಸಂಘಟನೆ ಗುರುವಾರ ತಿಳಿಸಿದೆ.

ಉಗ್ರ ಸಂಘಟನೆ ಅಲ್ಖೈದಾದೊಂದಿಗೆ ಸಂಪರ್ಕ ಹೊಂದಿರುವ ಹಯಾತ್ ತಹ್ರಿರ್ ಅಲ್-ಶಾಮ್ ಸಂಘಟನೆ ಸದಸ್ಯರು ವಾಯುವ್ಯ ಸಿರಿಯಾದ ಇದ್ಲಿಬ್ನಲ್ಲಿ ಅಲ್-ಖುರೇಷಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಅವರೊಂದಿಗೆ ಹೋರಾಡಿ ಖುರೇಷಿ ಮೃತಪಟ್ಟಿರುವುದಾಗಿ ಐಎಸ್ ವಕ್ತಾರ ಅಬು ಹುತೈಫಾ ಅಲ್-ಅನ್ಸಾರಿ ಆಡಿಯೊ ಸಂದೇಶದಲ್ಲಿ ತಿಳಿಸಿದ್ದಾನೆ.

ಇರಾಕ್ನ ಉಗ್ರ ಅಬು ಬಕರ್ ಅಲ್–ಬಾಗ್ದಾದಿ 2014ರಲ್ಲಿ ಐಎಸ್ ಸಂಘಟನೆಯನ್ನು ಆರಂಭಿಸಿದ್ದ. 2019ರಲ್ಲಿ ಅಮೆರಿಕದ ಸೇನಾ ಪಡೆಗಳು ವಾಯುವ್ಯ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ ಬಾಗ್ದಾದಿ ಹತನಾಗಿದ್ದ. ಅಲ್ಲಿಂದ ಈ ವರೆಗೆ ಸಂಘಟನೆಯ ನಾಲ್ವರು ಮುಖ್ಯಸ್ಥರು ಹತರಾಗಿದ್ದಾರೆ. ಅಲ್ ಖುರೇಷಿ 2022ರ ನವೆಂಬರ್ನಲ್ಲಿ ಐಎಸ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.